ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುದುಚೇರಿ ಗವರ್ನರ್ ಆಗಿ ತಮಿಳುಸಾಯಿ ಸೌಂದರರಾಜನ್ ಪದಗ್ರಹಣ

ಪುದುಚೇರಿ: ಕಿರಣ್ ಬೇಡಿ ಪದಚ್ಯುತಿ ಬಳಿಕ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರ್ ರಾಜನ್ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಫೆಬ್ರುವರಿ 16ರಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಡಾ. ಕಿರಣ್ ಬೇಡಿ ಅವರನ್ನು ಪದಚ್ಯುತಿಗೊಳಿಸಲಾಗಿತ್ತು. ಬಳಿಕ ತಮಿಳುಸಾಯಿ ಸೌಂದರರಾಜನ್ ಅವರು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಹೆಚ್ಚುವರಿ ಜವಾಬ್ದಾರಿ ವಹಿಸುವಂತೆ ರಾಷ್ಟ್ರಪತಿ ಭವನ ಸೂಚಿಸಿತ್ತು.

ಪುದುಚೇರಿಯ ರಾಜ ನಿವಾಸದಲ್ಲಿ ಗುರುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ತಮಿಳುಸಾಯಿ ಸೌಂದರರಾಜನ್ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಪುದುಚೇರಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮಿಳು ಭಾಷೆ ಮಾತನಾಡುವ ವ್ಯಕ್ತಿಯೊಬ್ಬರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳ್ಳುತ್ತಿದ್ದಾರೆ. ಈ ಮೂಲಕ ತಮಿಳುಸಾಯಿ ಸೌಂದರರಾಜನ್ ವಿಶಿಷ್ಟ ದಾಖಲೆ ಬರೆದರು. ಅವರು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷೆ ಕೂಡಾ ಆಗಿದ್ದಾರೆ.

Edited By : Nirmala Aralikatti
PublicNext

PublicNext

18/02/2021 03:10 pm

Cinque Terre

48.71 K

Cinque Terre

0

ಸಂಬಂಧಿತ ಸುದ್ದಿ