ಮೈಸೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಅವರು ರಾಮಮಂದಿರ ನಿರ್ಮಾಣಕ್ಕೆ 10 ರೂಪಾಯಿ ದೇಣಿಗೆ ನೀಡಿದ್ದಾರೆ.
ಜಿಲ್ಲೆಯ ವರುಣ ಹೋಬಳಿ ಸಿದ್ದರಾಮನ ಹುಂಡಿ ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡರ ನಿವಾಸಕ್ಕೆ ತೆರಳಿ ನಿಧಿ ಕೇಳಿದ್ದಾರೆ. ಹೀಗಾಗಿ ಸಿದ್ದೇಗೌಡ ಅವರು 10 ರೂ. ದೇಣಿಗೆ ನೀಡಿ ರಶೀದಿ ಪಡೆದಿದ್ದಾರೆ. ಈ ಮೂಲಕ ಸಿದ್ದರಾಮನ ಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 40 ಸಾವಿರ ದೇಣಿಗೆ ಸಂಗ್ರಹವಾಗಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಬಿಜೆಪಿ ಕಾರ್ಯಕರ್ತರು ಇತ್ತ ಸಿದ್ದರಾಮಯ್ಯ ಅವರ ಅಣ್ಣನ ಪುತ್ರನ ಬಳಿಯೂ ಸಹ ದೇಣಿಗೆ ಕೇಳಿದ್ದಾರೆ. ಇದಕ್ಕೆ ನಾನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ. ನಮ್ಮೂರಿನಲ್ಲಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
PublicNext
17/02/2021 07:54 am