ಬೆಳಗಾವಿ: ಗೋಕಾಕ್‍ನಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮೋಸ್ಟ್ ವೆಲ್‍ಕಮ್ ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಈಗ ಮತ್ತೆ ತಮ್ಮ ಲಕ್ಷ್ಮಿ ಹೆಬ್ಬಾಳಕರ್ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.
ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕನಿಂದ ಸ್ಪರ್ಧೆ ಮಾಡೋದಾದ್ರೆ ಮೋಸ್ಟ್ ವೆಲ್ ಕಮ್ ಅಂತಾ ಹೇಳಿದ್ದೇನೆ. ಇನ್ನು ಹೆಬ್ಬಾಳ್ಕರ್ ಔಟ್ ಆಪ್ ಮೈಂಡ್ ಆಗಿದ್ದಾರೆ, ಅದಕ್ಕೆ ಹೀಗೆ ಮಾತಾನಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆದರೆ ಬಸ್ ಸ್ಟಾಂಡ್‍ನಲ್ಲಿ ಹುಡುಕಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಸಚಿವರ ಮಾತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ತೀಕ್ಷ್ಣವಾಗಿಯೇ ಉತ್ತರ ನೀಡಿದ್ದಾರೆ. ನಾನು ಇಂತಹ ಅಸಮಂಜಸಕ್ಕೆ ಉತ್ತರ ನೀಡೊಲ್ಲ, ಆದರೆ ಹೌದು ನನ್ನ ಔಟ್ ಆಫ್ ಮೈಂಡ್ ಆಗಿದ್ದರಿಂದ ನಾನು ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸುವೆ. ಏಕೆಂದರೆ ಗೋಕಾಕ್ ಜನತೆನೇ ನನಗೆ ನೀವು ಗೋಕಾಕದಲ್ಲಿ ಸ್ಪರ್ಧಿಸಬೇಕು ಅಂತಾ ಹೇಳ್ತಾ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಇಷ್ಟು ದಿನ ಇಬ್ಬರ ನಡುವೆ ತಣ್ಣಗಾಗಿದ್ದ ವಾಕ್ಸಮರ ಮತ್ತೆ ಆರಂಭವಾಗಿದ್ದು. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.
PublicNext
13/02/2021 07:22 pm