ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಟ್ವೀಟ್ ಸಮರ ನಡೆಸಿದ್ದು, ಪರಸ್ಪರ ಕಾಲೆಳೆದುಕೊಳ್ಳುತ್ತಿವೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಪತ್ನಿ ಸೋನಿಯಾ ಗಾಂಧಿ, ಮಕ್ಕಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಫೋಟೋವನ್ನು ಟ್ವೀಟ್ ಮಾಡಿರುವ ಬಿಜೆಪಿ, “ಹಮ್ ದೋ, ಹಮಾರೆ ದೋ, ಭಾರತ್ ಕೋ ಬರ್ಬಾದ್ ಕರ್ ದೋ'' (ನಾವಿಬ್ಬರು, ನಮಗಿಬ್ಬರು, ದೇಶವನ್ನು ಬರ್ಬಾದ್ ಮಾಡಿಬಿಡಿ) ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ''ಅಲ್ಲಿ ಕಂಪನಿ ಸರ್ಕಾರ, ಇಲ್ಲಿ ಫ್ಯಾಮಿಲಿ ಸರ್ಕಾರ. ಅಲ್ಲಿ ಕಂಪನಿ ಲೂಟಿ, ಇಲ್ಲಿ ಫ್ಯಾಮಿಲಿ ಪಾರ್ಟಿ ಅಲ್ಲವೇ'' ಎಂದು ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕಾಲೆಳೆದಿದೆ.
PublicNext
12/02/2021 07:35 pm