ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರದ ಆಸೆಯಾದಾಗಲಷ್ಟೇ ಅಹಿಂದ ನೆನಪಾಗುತ್ತೆ ಯಾಕೆ? ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಬೆಂಗಳೂರು ಅಧಿಕಾರ ಹಿಡಿಯುವ ಕನಸು ಕಂಡಾಗಲೆಲ್ಲ ಅಹಿಂದ ವರ್ಗ ನೆನಪಾಗುವುದೇಕೆ? ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ. ಅಧಿಕಾರದಲ್ಲಿದ್ದಾಗ ದಲಿತರ, ಹಿಂದುಳಿದವರ ವಿರೋಧವಿದ್ದಾಗಲೂ ಒಂದು ಸಮುದಾಯವನ್ನು ಓಲೈಸಲು ಟಿಪ್ಪುವಿನ ಜಯಂತಿ ಆಚರಿಸಿದಿರಿ. ಈಗ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದುಳಿದ ಹಾಗೂ ದಲಿತ ಅಸ್ತ್ರದ ಮೊರೆ ಹೋಗಿದ್ದೀರಿ ಎಂದು ಬಿಜೆಪಿ ಹೇಳಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ವೀರಶೈವ-ಲಿಂಗಾಯತ‌ ಎಂದು ಸಮಾಜ ಒಡೆಯಲು ಹೋಗಿದ್ದು ನೀವೇ ಅಲ್ವೇ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಎಂಬ ಸಮಾವೇಶ ಮಾಡಿಕೊಂಡು ತಾನು ಜಾತ್ಯಾತೀತ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲು ನಿಮ್ಮ ಮನಸ್ಸು ಒಪ್ಪುತ್ತದೆಯೇ? ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವವರು ಜಾತ್ಯಾತೀತರು ಹೇಗಾಗುತ್ತಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.

Edited By : Nagaraj Tulugeri
PublicNext

PublicNext

12/02/2021 07:56 am

Cinque Terre

58.65 K

Cinque Terre

10

ಸಂಬಂಧಿತ ಸುದ್ದಿ