ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತ ಹೋರಾಟದ ನಾಯಕ ರಾಕೇಶ್​ ಟಿಕೈಟ್​ ಒಂದಲ್ಲ ಎರಡಲ್ಲ 80 ಕೋಟಿ ಆಸ್ತಿ ಒಡೆಯ!

ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಒಪ್ಪುತ್ತಿಲ್ಲ, ರೈತರು ಬಿಡುತ್ತಿಲ್ಲ ಎನ್ನುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಈ ನಡುವೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು. ರೈತರ ಹೋರಾಟದ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್​ ಯೂನಿಯನ್​ ಸಂಘಟನೆಯ ಮುಖಂಡ ರಾಕೇಶ್​ ಟಿಕೈಟ್ ಒಂದಲ್ಲ ಎರಡಲ್ಲ 80 ಕೋಟಿ ರೂ. ಮೌಲ್ಯದ ಆಸ್ತಿ ಒಡೆಯ ಎನ್ನುವುದು ವರದಿಯಾಗಿದೆ.

ವರದಿಗಳ ಪ್ರಕಾರ ರಾಕೇಶ್​ ಟಿಕೈಟ್ ಅವರು ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಆಸ್ತಿ ಹೊಂದಿದ್ದಾರೆ. ಈ ನಾಲ್ಕು ರಾಜ್ಯಗಳಲ್ಲಿರುವ ಪ್ರಮುಖ 13 ನಗರಗಳಲ್ಲಿ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅವರಿಗೆ ಎನ್ನಲಾಗಿದೆ.

ವಿಶೇಷವೆಂದರೆ ರಾಕೇಶ್ ಅವರು ಆಸ್ತಿ ಮಾಡುವುದಕ್ಕೆ ಮುಕಫರ್ನಗರ, ಲಲಿತ್‌ಪುರ, ಲಖಿಂಪುರ್ ಖೇರಿ, ಬಿಜ್ನೋರ್, ಬಡಾನ್, ದೆಹಲಿ, ನೋಯ್ಡಾ, ಗಾಜಿಯಾಬಾದ್, ಡೆಹ್ರಾಡೂನ್, ರೂರ್ಕಿ, ಹರಿದ್ವಾರ, ಮತ್ತು ಮುಂಬೈನಂತಹ ನಗರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಅದಷ್ಟೇ ಅಲ್ಲದೆ ಅವರಿಗೆ ಉದ್ಯಮ ಕಡೆಯೂ ಹೆಚ್ಚಿನ ಒಲವು ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Edited By : Vijay Kumar
PublicNext

PublicNext

11/02/2021 06:44 pm

Cinque Terre

92.65 K

Cinque Terre

29

ಸಂಬಂಧಿತ ಸುದ್ದಿ