ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ಗುಲಾಮ್ ನಬಿ ಆಜಾದ್ ಸದಸ್ಯತ್ವದ ಅವಧಿ ಮುಕ್ತಾಯವಾಗಿದೆ. ಈ ವೇಳೆ ರಾಜ್ಯ ಸಭೆಯಲ್ಲಿ ವಿದಾಯ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ.
ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಕೆಲಸಗಳನ್ನು ನಾನು ಎಂದೆಂದೂ ಮರೆಯಲಾರೆ. ಗುಲಾಂ ನಬಿ ಆಜಾದ್ ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ, ನಾವು ಇಬ್ಬರು ಒಟ್ಟಿಗೆ ಮುಖ್ಯಮಂತ್ರಿಯಾಗಿದ್ದೆವು. ನಾನು ಸಿಎಂ ಆಗುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ. ಆ ವೇಳೆಗಾಗಲೇ ಆಜಾದ್ ಅವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು ಎಂದು ಮೋದಿ ಹೇಳಿದ್ದಾರೆ.
ತೋಟಗಾರಿಕೆ ಬಗ್ಗೆ ಗುಲಾಂ ನಬಿ ಆಜಾದ್ ಅವರಿಗೆ ಅಪಾರ ಅಭಿರುಚಿಯಿದೆ ಎಂದು ಹೇಳಿದರು, ಇನ್ನೂ ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಚುನಾವಣೆ ಗೆಲ್ಲಲು ಆಜಾದ್ ಅವರ ಪಾತ್ರವನ್ನು ಹೊಗಳಿದ್ದರು.
PublicNext
09/02/2021 01:23 pm