ಬೆಳಗಾವಿ: ರೈತರನ್ನು ಉಗ್ರವಾದಿಗಳು, ಖಲಿಸ್ತಾನಿಗಳು ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿ ಮೂಲದ ವಕೀಲ ಹರ್ಷವರ್ಧನ್ ಪಾಟೀಲ್ ಕಂಗನಾ ರಣಾವತ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬೆಳಗಾವಿಯ ತಿಲಕ್ವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮುಂದಿನ 24 ಗಂಟೆಗಳಲ್ಲಿ ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ.
ನಾನು ವೃತ್ತಿಯಿಂದ ವಕೀಲನಾದರೂ ಪ್ರವೃತ್ತಿಯಲ್ಲಿ ಕೃಷಿಕನಾಗಿದ್ದೇನೆ. ನನ್ನದು ಮೂಲ ಕೃಷಿ ಕುಟುಂಬ. ರೈತರನ್ನು ಅವಮಾನ ಮಾಡಿರುವ ಕಂಗನಾ ಅವರ ಟ್ವಿಟರ್ ಖಾತೆಯನ್ನು ನಿಷೇಧಿಸಬೇಕು ಇಲ್ಲದಿದ್ದಲ್ಲಿ ತಾವು ಕೋರ್ಟ್ ಮೊರೆ ಹೋಗೋದಾಗಿ ವಕೀಲ ಹರ್ಷವರ್ದನ್ ಪಾಟೀಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
PublicNext
09/02/2021 08:05 am