ನವದೆಹಲಿ: ಸಾಕಷ್ಟು ಸವಾಲುಗಳನ್ನು ಎದುರಿಸಿ ನಾವು ಮುನ್ನುಗ್ಗುತ್ತಿದ್ದೇವೆ. ಹೊಸ ದಶಕದ ಆರಂಭದಲ್ಲಿ ನಮಗೆ ಹೊಸ ಆತ್ಮವಿಶ್ವಾಸ ಬಂದಿದೆ. ಆದ್ರೆ ನಮ್ಮವರೇ ನಮ್ಮ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಮೋದಿ, ರಾಷ್ಟ್ರಪತಿ ಭಾಷಣ ಕೇಳಬೇಕಿತ್ತು. ರಾಷ್ಟಪತಿ ಭಾಷಣ ಹೊಸ ವಿಶ್ವಾಸ ಮೂಡಿಸಿದೆ. ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಆಗುತ್ತಿದೆ. ದೇಶದ ಭವಿಷ್ಯಕ್ಕಾಗಿ ನಾವು ಸಿದ್ಧವಾಗುತ್ತಿದ್ದೇವೆ. ದೇಶದ ಕನಸುಗಳನ್ನು ಈಡೇರಿಸಲು ತಯಾರಾಗುತ್ತಿದ್ದೇವೆ. ಇಡೀ ಪ್ರಪಂಚ ಇಂದು ಭಾರತದತ್ತ ನೋಡುತ್ತಿದೆ. ಇತರ ದೇಶಗಳು ಭಾರತದ ಮೇಲೆ ವಿಶ್ವಾಸ ಇಟ್ಟಿವೆ ಎಂದರು.
ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಇದೊಂದು ಮಾನವ ಸಂಸ್ಥೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
PublicNext
08/02/2021 01:00 pm