ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಾ ತಲುಪಿದ ಪಂಚಮಸಾಲಿ ಮೀಸಲಾತಿ ಹೋರಾಟ

ತುಮಕೂರು: ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿಗಳು ಶೀಘ್ರ ಸಂಪುಟ ಸಭೆ ಕರೆದು ನಿರ್ಣಯ ಪ್ರಕಡಿಸಬೇಕು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಕೂಡಲಸಂಗಮದಿಂದ ಹಮ್ಮಿಕೊಂಡಿರುವ ಪಾದಯಾತ್ರೆ ತಾವರೆಕೆರೆಯಿಂದ ಶಿರಾ ಕಡೆಗೆ ಹೊರಟಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ತಾವು ಪಾದಯಾತ್ರೆ ಶುರು ಮಾಡಿದಾಗ ಬೆಂಗಳೂರಿಗೆ ಹೋಗಿ ಪ್ರಮಾಣಪತ್ರ ಹಿಡಿದುಕೊಂದು ಬರುವುದಾಗಿ ಜನತೆಗೆ ಮಾತು ಕೊಟ್ಟಿದ್ದೆವು. ಹೀಗಾಗಿ ಮುಖ್ಯಮಂತ್ರಿಗಳು ಗಟ್ಟಿ ಮಸ್ಸು ಮಾಡಿ ಆದಷ್ಟು ಬೇಗ ವರದಿ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

08/02/2021 09:49 am

Cinque Terre

73.65 K

Cinque Terre

2

ಸಂಬಂಧಿತ ಸುದ್ದಿ