ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕೀಲೆ ಮಸಿ ಹಚ್ಚಿದ್ದು ಸರಿಯಲ್ಲ ಎಂದ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ: ಒಬ್ಬ ಜವಾಬ್ದಾರಿಯುತ ವಕೀಲೆ ಕೋರ್ಟ್ ಆವರಣದಲ್ಲಿ ಆ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಚಿಂತಕ ಭಗವಾನ್ ಮೇಲೆ ವಕೀಲೆ ಮಸಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಬಳ್ಳಾಪುರದ ಕಲ್ಲಿನಾಯಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ನ್ಯಾಯವಾದಿ ಆ ರೀತಿ ಮಾಡಿದರೆ ಸಮಾಜಕ್ಕೆ ಒಂದು ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಹಾಗಂತ ನಾನು ಭಗವಾನ್ ರನ್ನ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಭಗವಾನ್ ಏನು ಅಂತ ಎಲ್ಲರಿಗೂ ಗೊತ್ತು. ಆತ ಸಾಮಾನ್ಯ ಜನರ ಭಾವನೆಗಳ ಮೇಲೆ ಹಲ್ಲೆ ಮಾಡುತ್ತಾ ಬಂದಿದ್ದಾನೆ. ಆತನಿಗೆ ಅವರ ತಂದೆ ತಾಯಿಗಳು ಅದ್ಯಾಗೋ ಭಗವಾನ್ ಅಂತ ಹೆಸರು ಇಟ್ಟುಬಿಟ್ಟಿದ್ದಾರೆ ಎಂದರು.ಭಗವಾನ್ ಅನ್ನೋ ವ್ಯಕ್ತಿ ಬುದ್ಧಿಜೀವಿ ಅನ್ನೋ ಪದಕ್ಕೆ ಅಪವಾದ ಎಂಬಂತಿದ್ದಾನೆ ಎಂದು ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಶಾಲೆಗೆ ಭೇಟಿ ಕೊಟ್ಟು ಸುರೇಶ್ ಕುಮಾರ್ ಹೇಳಿದರು.

Edited By : Nagaraj Tulugeri
PublicNext

PublicNext

05/02/2021 08:52 pm

Cinque Terre

75.53 K

Cinque Terre

21

ಸಂಬಂಧಿತ ಸುದ್ದಿ