ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಗಾದಿಗೆ ಉತ್ತರ ಕರ್ನಾಟಕದವರೇ ಸಿಎಂ: ಯತ್ನಾಳ್

ಚಿತ್ರದುರ್ಗ: ಯುಗಾದಿ ಬಳಿಕ ಎರಡನೇ ಹಂತದ ಯುಗ ಮತ್ತು ನಾಯಕತ್ವ ಪ್ರಾರಂಭವಾಗಲಿದೆ. ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿ ಈ ರಾಜ್ಯಕ್ಕೆ ಅಗತ್ಯವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಪಂಚಮಸಾಲಿ ಪಾದಾಯಾತ್ರೆ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ವರ್ಗದ ವಿಶ್ವಾಸ ಪಡೆದು ಸಿಎಂ ಆಗುವ ಕಾಲ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದಿಂದ ಅಂತಹ ರಾಜಕಾರಣಿ ಬರ್ತಾರೆ ಎಂದು ಸಿಎಂ ಬದಲಾವಣೆಯ ಮಾತನ್ನ ಪುನರುಚ್ಛಿಸಿದರು.

ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ. ನಾನು ಏನೆಂಬುದು ದೆಹಲಿ ಹೈಕಮಾಂಡ್‌ಗೆ ಗೊತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿದೆ. ಪಂಚಮಸಾಲಿ ಶ್ರೀಗಳು ಬಿಸಿಲಲ್ಲಿ ಪಾದಯಾತ್ರೆ ಹೊರಟರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಲಿಲ್ಲ. ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು ಎಂದು ತಿಳಿಸಿದರು.

Edited By : Vijay Kumar
PublicNext

PublicNext

03/02/2021 08:31 am

Cinque Terre

55.3 K

Cinque Terre

5

ಸಂಬಂಧಿತ ಸುದ್ದಿ