ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ರಕ್ಷಣೆಗೆ ಇತರರ ಮೇಲೆ ಅವಲಂಬನೆ ಆಗೋದಿಲ್ಲ: ರಾಜನಾಥ್ ಸಿಂಗ್

ಬೆಂಗಳೂರು: ನಮ್ಮ ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆ ಹೀಗೆಯೇ ಮುಂದುವರೆಸಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸಿರುವ ರಾಜನಾಥ್ ಸಿಂಗ್ ಅವರು, ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್‌) ಹಗರು ಯುದ್ಧ ವಿಮಾನ (ಎಲ್‌ಸಿಎ) ತಯಾರಿಕಾ ಎರಡನೇ ಕಾರ್ಯಕ್ಷೇತ್ರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ ಅವರು, ನಮ್ಮ ದೇಶದ ರಕ್ಷಣೆಗೆ ನಾವು ಇತರೆ ರಾಷ್ಟ್ರಗಳ ಮೇಲೆ ಹೀಗೆಯೇ ಅವಲಂಬನೆಯಾಗುವುದನ್ನು ಮುಂದುವರೆಸಲು ಸಾಧ್ಯವಿಲ್ಲ. ತೇಜಸ್ ಎಂ1ಎ ಖರೀದಿಗೆ ಸಾಕಷ್ಟು ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ ಎಂಬುದಾಗಿ ತಿಳಿದುಬಂದಿದೆ. ಶೀಘ್ರದಲ್ಲಿಯೇ ಇತರೆ ರಾಷ್ಟ್ರಗಳಿಂದ ಆರ್ಡರ್ ಗಳನ್ನು ಪಡೆಯಲಿದ್ದೀರಿ ಎಂದು ಹೆಚ್ಎಎಲ್'ಗೆ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

02/02/2021 09:37 pm

Cinque Terre

94.02 K

Cinque Terre

8

ಸಂಬಂಧಿತ ಸುದ್ದಿ