ನವದೆಹಲಿ: ರಾಹುಲ್ ಗಾಂಧಿ ಕಾಲೆಳೆಯಲೆಂದೇ ಕೆಲವರು ಕಾದು ಕುಳಿತಿರುವರೇನು ಎನ್ನುವಂತೆ ಒಂದಿಲ್ಲೊಂದು ರೀತಿಯಲ್ಲಿ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡತ್ತಾನೆ ಇರುತ್ತಾರೆ. ಸದ್ಯ ಇಂದು ಕೇಂದ್ರದ ಬಜೆಟ್ ಮಂಡನೆಯಾಗುತ್ತಿರುವ ವೇಳೆ ಸದನದಲ್ಲಿ ಎಲ್ಲರೂ ತದೇಕ ಚಿತ್ತದಿಂದ ಅದನ್ನು ಆಲಿಸುತ್ತಿದ್ದರು.
ಆದರೆ ಸಂಸದ ರಾಹುಲ್ ಗಾಂಧಿ ಮಾತ್ರ ನಿದ್ದೆಗೆ ಜಾರಿಬಿಟ್ಟರು. ಆಡಳಿತ ಪಕ್ಷದವರು ಬಜೆಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಬಜೆಟ್ ವಿರುದ್ಧವಾಗಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ರಾಗಾ ನಿದ್ದೆಗೆ ಜಾರಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ.
ಮಾಸ್ಕ್ ಧರಿಸಿದ್ದ ಅವರು ನಿದ್ದೆಗೆ ಜಾರಿರುವ ಫೋಟೋ ಕ್ಲಿಕ್ಕಿಸಲಾಗಿದೆ. ಈ ಫೋಟೋ ಇಟ್ಟುಕೊಂಡು ಅವರು ಈ ಹಿಂದೆ ಕಣ್ಣು ಕ್ಲಿಕ್ಕಿಸಿದ ಫೋಟೋದ ಜತೆಗೆ ಸೇರಿಸಿ ಮೀಮ್ಸ್ ಕ್ರಿಯೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ರಾಹುಲ್ ಗಾಂಧಿ ಬಯೋಲಾಜಿ ಕ್ಲಾಸ್ ಮತ್ತು ಗಣಿತ ಕ್ಲಾಸ್ ಎಂದು ಗೇಲಿ ಮಾಡಿದ್ದರೆ, ಬಜೆಟ್ ಅಂದರೆ ಏನು ಎಂದು ಅರ್ಥವಾಗದಿದ್ದರೆ ಹೀಗೇ ಆಗೋದು ಎಂದು ಕೆಲವರು ಕಾಲೆಳೆದಿದ್ದಾರೆ.
ಕಾಂಗ್ರೆಸ್ ನ ಭಾವಿ, ಕಾಯಂ ಅಧ್ಯಕ್ಷ ಹೀಗೇ ಮಾಡೋದಾ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಇನ್ನೇನು ಪ್ರೇಮಿಗಳ ದಿನ ಬಂದುಬಿಡ್ತು. ಅದಕ್ಕೆ ರಾಹುಲ್ ಗಾಂಧಿ ಪ್ರೇಮಿಗಳ ದಿನಕ್ಕಿಂತ ಮೊದಲು ಚೆನ್ನಾಗಿದ್ದು, ಯಾರೂ ಪ್ರೇಮಿಗಳು ಇಲ್ಲ ಎಂದು ಈ ದಿನದ ನಂತರ ಹೀಗೆ ಸಪ್ಪೆ ಮೋರೆ ಹಾಕಿಕೊಳ್ಳಲಿದ್ದಾರೆ ಎಂದು ಟೀಕಿಸಿದ್ದಾರೆ.
PublicNext
01/02/2021 07:55 pm