ಜೈಪುರ: ರಾಜಸ್ಥಾನ ಬಿಜೆಪಿ ಮುಖಂಡನೋರ್ವ ಸಾರ್ವಜನಿಕ ಮುಂದೆಯೇ ನರ್ತಕಿ ಜೊತೆ ಅಶ್ಲೀಲವಾಗಿ ನೃತ್ಯ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಚಿತ್ತೋಢಗಢ ಜಿಲ್ಲೆಯ ಮಾಂಗರೋಲ್‌ನಲ್ಲಿ ಜನವರಿ 23ರಂದು ಘಟನೆ ನಡೆದಿದೆ. ಅಲ್ಲಿನ ಬಿಜೆಪಿ ಮುಖಂಡ ಕೈಲಾಶ್ ಗುರ್ಜರ್ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇಲ್ಲಿ ಡಾನ್ಸ್ ಮಾಡಿದ ಮಹಿಳೆ ಓರ್ವ ಪ್ರೊಫೆಷನಲ್ ಡಾನ್ಸರ್ ಎನ್ನಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಮುಖಂಡನಿಗೆ ಚೀಮಾರಿ ಹಾಕಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೈಲಾಶ್ ಗುರ್ಜರ್, ''ಕುಟುಂಬಸ್ಥರ ಮದುವೆಯಲ್ಲಿ ಭಾಗಿಯಾಗಿದ್ದಾಗ ಕೆಲವರು ವಿಡಿಯೋ ಸೆರೆಹಿಡಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ತಪ್ಪು ಬರಹಗಳೊಂದಿಗೆ ವಿಡಿಯೋ ವೈರಲ್ ಮಾಡಲಾಗಿದೆ'' ಎಂದು ದೂರಿದ್ದಾರೆ.
PublicNext
28/01/2021 08:05 pm