ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಡಿ ವಿಚಾರದಲ್ಲಿ ಎಲ್ಲ ಸಚಿವರೂ ಒಗ್ಗಟ್ಟಾಗಿದ್ದೇವೆ: ಜಾರಕಿಹೊಳಿ‌

ಬೆಳಗಾವಿ: ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಪುಸ್ತಕ ಬಿಡುಗಡೆ ವಿಚಾರವಾಗಿ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಸೇನೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ಜನರನ್ನು ಗಡಿ ವಿಚಾರವಾಗಿ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಸೌಹಾರ್ದತೆಯಿಂದ ಬದುಕುವ ಸ್ಥಳ. ನಮ್ಮಲ್ಲಿ ಭೇದಭಾವ, ತಾರತಮ್ಯ ಇಲ್ಲ. ಉದ್ಧವ ಠಾಕ್ರೆ ಎಲ್ಲಾ ರಂಗದಲ್ಲಿ ವಿಫಲವಾಗಿದ್ದು ಗಡಿ ವಿಚಾರವನ್ನು ಕೆದಕಿ ಜನರ ಮನಸು ಸೆಳೆಯಲು ಶಿವಸೇನೆ ಕುತಂತ್ರ ನಡೆಸಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.

ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ. ಮಹಾಜನ ವರದಿ ಈಗಾಗಲೇ ಒಪ್ಪಲಾಗಿದೆ.

ಗಡಿ ವಿಚಾರದಲ್ಲಿ ರಾಜ್ಯದ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ. ಎಲ್ಲ 34 ಜನ ಸಚಿವರು ಗಡಿ ವಿಚಾರಕ್ಕೆ ಬದ್ಧವಾಗಿ ಇದ್ದೇವೆ. ಹೀಗಾಗಿ ಗಡಿ ಉಸ್ತುವಾರಿ ಸಚಿವರ ನೇಮಕ ಅಗತ್ಯ ಇಲ್ಲ. ಶಿವಸೇನೆ ಅಜೆಂಡಾ ಗಡಿ ವಿವಾದ ಇದೆ.ಪುಸ್ತಕ ಬಿಡುಗಡೆ ಹೆಚ್ಚಿನ ಮಹತ್ವ ಕೊಡಬೇಡಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Edited By : Nagaraj Tulugeri
PublicNext

PublicNext

27/01/2021 07:37 pm

Cinque Terre

109.34 K

Cinque Terre

5

ಸಂಬಂಧಿತ ಸುದ್ದಿ