ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಬಜೆಟ್ 2021 ಪೇಪರ್ ಲೆಸ್: ಮಾಹಿತಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆ

ನವದೆಹಲಿ: ಬಜೆಟ್ ಪೂರ್ವಭಾವಿಯಾಗಿ ನಡೆಯುವ ಹಲ್ವಾ ಸಮಾರಂಭವು ಇಂದು ನಡೆಯಿತು. ಕೋವಿಡ್–19 ಕಾರಣ ಈ ಬಾರಿ ಕೇಂದ್ರ ಬಜೆಟ್ ಮುದ್ರಣ ಇರುವುದಿಲ್ಲ. ಬದಲಿಗೆ ಬಜೆಟ್ ಪ್ರತಿಗಳು ಡಿಜಿಟಲ್ ರೂಪದಲ್ಲಿ ಲಭ್ಯವಿರಲಿವೆ ಎಂದು ಸರ್ಕಾರ ತಿಳಿಸಿದೆ.

ಬಜೆಟ್ ಪ್ರತಿಗಳು ಸುಲಭವಾಗಿ ಸಂಸದರಿಗೆ ಮತ್ತು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಹೊಸ ಮೊಬೈಲ್ ಆ್ಯಪ್ (Union Budget Mobile App) ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ದೇಶದ ಮೊದಲ ಬಜೆಟ್ 1947ರ ನವೆಂಬರ್ 26ರಂದು ಮಂಡನೆಯಾದಂದಿನಿಂದ ಈವರೆಗೂ ಬಜೆಟ್ ಪ್ರತಿಗಳನ್ನು ಮುದ್ರಿಸಿ ಹಂಚಲಾಗುತ್ತಿತ್ತು. ಆದರೆ ಈ ಬಾರಿ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡಿಸಲಾಗುತ್ತಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021 ಅನ್ನು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ವಾರ್ಷಿಕ ಹಣಕಾಸು ಸ್ಟೇಟ್‌ಮೆಂಟ್, ಡಿಮಾಂಡ್ ಫಾರ್ ಗ್ರಾಂಟ್ಸ್, ಹಣಕಾಸು ಬಿಲ್ ಸೇರಿದಂತೆ ಕೇಂದ್ರ ಬಜೆಟ್‌ನ ಎಲ್ಲ 14 ದಾಖಲೆಗಳು ಆ್ಯಪ್‌ನಲ್ಲಿ ದೊರೆಯಲಿವೆ.

Edited By : Vijay Kumar
PublicNext

PublicNext

23/01/2021 08:27 pm

Cinque Terre

46.46 K

Cinque Terre

0

ಸಂಬಂಧಿತ ಸುದ್ದಿ