ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಚ್ ಡಿಕೆ ಮಾತಿಗೆ, ಜಿ.ಟಿ.ದೇವೇಗೌಡ ಗರಂ..

ಮೈಸೂರು: ಮೈಸೂರಿಗೆ ಬಂದು ನನ್ನನ್ನು ಪಕ್ಷದಿಂದ ಕಿತ್ತು ಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೆ ಏಕೆ ಪದೇಪದೇ ನನ್ನ ವಿಚಾರ ಮಾತನಾಡಬೇಕು?’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಗರಂ ಆಗಿದ್ದಾರೆ.ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಮಾರ ಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ.ನಟನೆ ಮಾಡುವುದನ್ನು ಎಚ್.ಡಿ.ಕುಮಾರಸ್ವಾಮಿ ಅವರನ್ನು ನೋಡಿಯೇ ಕಲಿಯಬೇಕು’ ಎಂದು ಎಂದು ವ್ಯಂಗ್ಯವಾಡಿದರು.

‘ಉಸ್ತುವಾರಿ ಸಚಿವರಾಗಿದ್ದಾಗಲೇ ನನ್ನನ್ನು ಕಡೆಗಣಿಸಲಾಗಿತ್ತು. ಇನ್ನು, ಈಗ ಮಾತು ಕೇಳುತ್ತಾರಾ? ಮೈಸೂರಿನ ಹೈಕಮಾಂಡ್ (ಸಾ.ರಾ.ಮಹೇಶ್) ಮಾತನ್ನು ಮಾತ್ರ ಕೇಳುತ್ತಾರೆ. ನನ್ನನ್ನು ಯಾವುದೇ ಸಭೆಗೆ ಕರೆಯುತ್ತಿಲ್ಲ. ಮಾಧ್ಯಮಕ್ಕೆ ಹೇಳುವುದೊಂದು ಒಳಗೆ ಮಾಡುವುದೊಂದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಕ್ಕೆ ಆಸೆಪಟ್ಟಿದ್ದರೆ ನಾರಾಯಣಗೌಡ, ಎಚ್.ವಿಶ್ವನಾಥ್, ಗೋಪಾಲಯ್ಯ ಜೊತೆ ನಾನು ಕೂಡ ಬಿಜೆಪಿಗೆ ಹೋಗುತ್ತಿದ್ದೆ. ಹಾಗೆ ಮಾಡಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇರಬಹುದಿತ್ತು’ ಎಂದು ಹೇಳಿದರು.

‘ಎಚ್.ಡಿ.ದೇವೇಗೌಡರ ಮನೆಗೆ ಹೋಗಿ ‘ಸಾಕು ಸ್ವಾಮಿ’ ಎಂದು ಕೈ ಮುಗಿದು ಬಂದಿದ್ದೇನೆ. ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಎರಡು ವರ್ಷ ಶಾಸಕನಾಗಿ ಕ್ಷೇತ್ರದ ಕೆಲಸ ಮಾಡಿಕೊಂಡಿರುತ್ತೇನೆ’ ಎಂದರು.

ಜೆಡಿಎಸ್ ಸಂಘಟನೆಗಾಗಿ ರಚಿಸಿರುವ ಸಮಿತಿಗೆ ಸೇರಿಸಿಕೊಳ್ಳದಿರುವ ಕುರಿತು, ‘ನನಗೆ ವಯಸ್ಸಾಯಿತು. ಹೀಗಾಗಿ, ಕಡೆಗಣಿಸಿರಬಹುದು’ ಎಂದು ಪ್ರತಿಕ್ರಿಯಿಸಿದರು.

Edited By : Nirmala Aralikatti
PublicNext

PublicNext

19/01/2021 07:03 pm

Cinque Terre

95.13 K

Cinque Terre

5

ಸಂಬಂಧಿತ ಸುದ್ದಿ