ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕೀಯದಲ್ಲಿ ಹೆಚ್ಚು ವಿವಾದಕ್ಕೆ ಒಳಗಾದ ವ್ಯಕ್ತಿ ನಾನು: ಸಿದ್ದರಾಮಯ್ಯ

ಮೈಸೂರು: ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.‌

ಮೈಸೂರಿನ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ನಾನು ಮಾತನಾಡುವುದಕ್ಕೆ ಮಾಧ್ಯಮವರು ಬಣ್ಣ ಹಚ್ಚಿದರೆ, ಆರ್‌ಎಸ್‌ಎಸ್‌ನವರು ರಂಗು ರಂಗಿನ ಬಣ್ಣ ಹಾಕುತ್ತಾರೆ. ಹಾಗಾಗಿ ನಾನು ಮಾತನಾಡುವ ಕೆಲ ವಿಚಾರಗಳು ವಿವಾದಗಳಾಗಿ ಬಿಡುತ್ತವೆ. ನಾನು ನೇರವಾಗಿ ಮಾತನಾಡುವವನು‌ ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಒರಟಾದ ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ಅದಕ್ಕೆ ವಿವಾದ ಆಗುತ್ತದೆ ಎಂದರು.

ಇತ್ತೀಚಿನ ವಿವಾದ ಅಂದರೆ ಹನುಮ‌ ಹುಟ್ಟಿದ ದಿನದ ವಿವಾದ. ಹನುಮ ಹುಟ್ಟಿದ್ದು ನನಗೆ ಗೊತ್ತಿರಲಿಲ್ಲ ಅದನ್ನ ಕೇಳಿದೆ. ನಿಮಗೆ ಯಾರಿಗಾದರೂ ಗೊತ್ತಾ ಹೇಳಿ ಅಂದೆ ಅದಕ್ಕೆ ಆರ್‌ಎಸ್ಎಸ್‌ನವರು ಅದನ್ನೇ ವಿವಾದ ಮಾಡಿಬಿಟ್ಟರು. ಸಾಮಾಜಿಕ ಜಾಲತಾಣದಲ್ಲಿ‌ ರಂಗುರಂಗಿನ ಬಣ್ಣ ಹಾಕಿ ಹರಿಬಿಟ್ಟರು ಎಂದು ತಿಳಿಸಿದರು.

Edited By : Vijay Kumar
PublicNext

PublicNext

17/01/2021 07:58 pm

Cinque Terre

54.43 K

Cinque Terre

8

ಸಂಬಂಧಿತ ಸುದ್ದಿ