ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ವಿಟ್ಟರ್‌‌ನಲ್ಲಿ ''ದೇಶ ವಿರೋಧಿ ಬಿಜೆಪಿ ಅರ್ನಬ್'' ಹ್ಯಾಶ್‌‌ಟ್ಯಾಗ್‌ ಟ್ರೆಂಡ್

ನವದೆಹಲಿ: ದೇಶ ವಿರೋಧಿ ಬಿಜೆಪಿ ಅರ್ನಬ್ ಹಾಗೂ ದೇಶ ವಿರೋಧಿ ಅರ್ನಬ್ ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ಹೌದು. 2019ರ ಫೆಬ್ರವರಿ 14ರಂದು ಪುಲ್ವಾಮ ಸಮೀಪ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯನ್ನು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಸಂಭ್ರಮಿಸಿದ್ದಾರೆ ಎಂದು ಇತ್ತೀಚೆಗೆ ಅವರ ವಾಟ್ಸಾಪ್ ಚಾಟ್‌ಗಳು ಬಹಿರಂಗ ಪಡಿಸಿವೆ. ಈ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಹಾಗೂ ಅವರನ್ನು ಬಂಧಿಸುವಂತೆ ಆಗ್ರಹಿಸಿ #AntiNationalBJPArnab (ದೇಶ ವಿರೋಧಿ ಬಿಜೆಪಿ ಅರ್ನಾಬ್), #AntiNationalArnab (ದೇಶ ವಿರೋಧಿ ಅರ್ನಾಬ್) ಹ್ಯಾಶ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ದೆಹಲಿ ಕಾಂಗ್ರೆಸ್‌, ಮಾನವ ಹಕ್ಕು ಹೋರಾಟಗಾರ ತಿರುಮುರುಗನ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಾರ್ವಜನಿಕರು ಟ್ವೀಟ್ ಮಾಡಿ ಅರ್ನಬ್ ಗೋಸ್ವಾಮಿ ವಿರುದ್ಧ ಅಸಮಾಧಾನ ಹಾಕಿದ್ದಾರೆ. ಜೊತೆಗೆ #AntiNationalBJPArnab, #AntiNationalArnab ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಈ ಎರಡೂ ಹ್ಯಾಶ್‌ಟ್ಯಾಗ್‌ಗಳು ಟ್ರೆಂಟ್ ಆಗಿವೆ.

Edited By : Vijay Kumar
PublicNext

PublicNext

17/01/2021 03:42 pm

Cinque Terre

117.28 K

Cinque Terre

27

ಸಂಬಂಧಿತ ಸುದ್ದಿ