ಹೈದರಾಬಾದ್: ಇಂದು ಭಾರತೀಯ ಸೇನಾ ದಿನಾಚರಣೆ. ಈ ಸಂದರ್ಭದಲ್ಲಿ ಸೇನೆಯ ಪುರುಷ ಮತ್ತು ಮಹಿಳಾ ಪಡೆಗೆ ಶುಭಾಶಯ ತಿಳಿಸಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ಭಾರತೀಯ ಸೇನೆಯ ಧೀರ ಪುರುಷರು ಮತ್ತು ಮಹಿಳೆಯರಿಗೆ ಶುಭಾಶಯಗಳು. ರಾಷ್ಟ್ರದ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಧೈರ್ಯಶಾಲಿ ಮತ್ತು ಬದ್ಧ ಸೈನಿಕರು, ಅನುಭವಿಗಳು ಮತ್ತು ಅವರ ಕುಟುಂಬಗಳಿಗೆ ಭಾರತ ಶಾಶ್ವತವಾಗಿ ಕೃತಜ್ಞರಾಗಿರಬೇಕು” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ ತಿಳಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, “ನಮ್ಮ ಸೈನ್ಯವು ಪ್ರಬಲವಾಗಿದೆ. ಧೈರ್ಯಶಾಲಿ ಮತ್ತು ದೃಢವಾದ ನಿಶ್ಚಯವನ್ನು ಹೊಂದಿದೆ. ಇದು ಯಾವಾಗಲೂ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ದೇಶದ ಎಲ್ಲ ಜನರ ಪರವಾಗಿ ನಾನು ಭಾರತೀಯ ಸೈನ್ಯಕ್ಕೆ ವಂದಿಸುತ್ತೇನೆ” ಎಂದಿದ್ದಾರೆ.
PublicNext
15/01/2021 12:52 pm