ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಲ್ಲಾಳಿ, ಭ್ರಷ್ಟಾಚಾರಿಗಳಿಗೆ ಮಂತ್ರಿಗಿರಿ: ಬಿಎಸ್‌ವೈ ವಿರುದ್ಧ ಹರಿಹಾಯ್ದ ವಿಶ್ವನಾಥ

ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ ದಲ್ಲಾಳಿ, ಭ್ರಷ್ಟಾಚಾರಿ, ಜನರಿಗೆ ಮೋಸ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ ಅವರು ಮತ್ತೆ ಗುಡುಗಿದ್ದಾರೆ.

ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವ ಮುನ್ನ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುವಾಗ ಒತ್ತಡ ಇರುವುದು ಸಹಜ.‌ ಆದರೆ ಭ್ರಷ್ಟರನ್ನು ಸಚಿವ ಮಾಡುವ ಒತ್ತಾಯ ಸಾಮಾನ್ಯವಾಗಿ ಮುಖ್ಯಮಂತ್ರಿಗೆ ಇರುವುದಿಲ್ಲ. ಸಿ.ಪಿ.ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾನೆ ಎಂದು ಕಿಡಿಕಾರಿದರು.

''ಸಮ್ಮಿಶ್ರ ಸರ್ಕಾರದಲ್ಲಿ ತಲ್ಲಣ ಮೂಡಿಸಿ 17 ಜನರು ಹೊರಬಂದಿದ್ದೇವೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಇತ್ತು. ಈಗಿನ ಬೆಳವಣಿಗೆ ನಿರಾಸೆ ಮೂಡಿಸಿದೆ'' ಎಂದು ಅಸಮಾಧಾನ ಹೊರ ಹಾಕಿದರು.

Edited By : Vijay Kumar
PublicNext

PublicNext

14/01/2021 05:45 pm

Cinque Terre

72.88 K

Cinque Terre

5

ಸಂಬಂಧಿತ ಸುದ್ದಿ