ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸೆಂಟರ್ ಆಯ್ತು ಬೆಳಗಾವಿ: ಒಂದೇ ಜಿಲ್ಲೆಗೆ ಐವರು ಮಂತ್ರಿಗಳು

ಬೆಳಗಾವಿ: ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ ಕತ್ತಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದೆ. ಈ ಮೂಲಕ ಬೆಳಗಾವಿ ಜಿಲ್ಲೆಗೆ ಅಧಿಕಾರದ ‘ಸುಗ್ಗಿ ಕಾಲ’ ಬಂದಂತಾಗಿದೆ. ಸಚಿವ ಸಂಪುಟದಲ್ಲಿ ಇಲ್ಲಿನ ಸದಸ್ಯರ ಸಂಖ್ಯೆ ಐದಕ್ಕೇರಿದೆ. ಇದರಿಂದ ಕುಂದಾನಗರಿ ಅಧಿಕಾರದ ಕೇಂದ್ರವಾದಂತಾಗಿದೆ.

ವಿಧಾನಪರಿಷತ್ ಸದಸ್ಯ ಅಥಣಿಯ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಸಾರಿಗೆ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ. ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದಾರೆ. ನಿಪ್ಪಾಣಿ ಕ್ಷೇತ್ರದ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಕಾಗವಾಡದ ಶ್ರೀಮಂತ ಪಾಟೀಲ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾರೆ. ಈ ಮೂಲಕ ಸರ್ಕಾರದ ಪ್ರಮುಖ ಖಾತೆಗಳು ಬೆಳಗಾವಿ ಜಿಲ್ಲೆಯ ಪಾಲಾಗಿವೆ.

ಸಚಿವರಲ್ಲಿ ಮೂರು ಸ್ಥಾನಗಳು ಲಿಂಗಾಯತ ಸಮಾಜಕ್ಕೆ ಸಿಕ್ಕಿದ್ದರೆ, ಮರಾಠಾ ಹಾಗೂ ವಾಲ್ಮೀಕಿ ನಾಯಕ ಸಮಾಜಕ್ಕೆ ತಲಾ ಒಂದು ಸ್ಥಾನ ದೊರೆತಿದೆ.

Edited By : Nagaraj Tulugeri
PublicNext

PublicNext

14/01/2021 08:14 am

Cinque Terre

95.77 K

Cinque Terre

10

ಸಂಬಂಧಿತ ಸುದ್ದಿ