ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿ ನಾಡಲ್ಲಿ ಬಿಜೆಪಿ ಭರ್ಜರಿ ಪ್ರಚಾರ: ರೈತರ ಮನೆಯಿಂದ ಒಂದು ಹಿಡಿ ಅಕ್ಕಿ ಸಂಗ್ರಹ

ಕೋಲ್ಕತ್ತಾ: ಪಶ್ಚಿಮ ಬಂಗಾಲದ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ರೈತ ಬ್ರಹ್ಮಾಸ್ತ್ರ ಪ್ರಯೋಗ ನಡೆಸಿರುವ ಕಮಲ ಪಡೆ 'ಕೃಷಿಕ್ ಸುರಕ್ಷಾ' ಮತ್ತು 'ಏಕ್‌ ಮುಟ್ಟಿ ಚಾವಲ್' (ಒಂದು ಹಿಡಿ ಅಕ್ಕಿ) ಅಭಿಯಾನ ಆರಂಭಿಸಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ನಡ್ಡಾ, ''ಪಿಎಂ ಕಿಸಾನ್ ಯೋಜನೆಯ ಹಣವನ್ನು ಇಷ್ಟು ದಿನ ತಡೆದಿದ್ದ ಮಮತಾ ಬ್ಯಾನರ್ಜಿ ಅವರು ಈಗ ಅದನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ದೀದಿ ಭಾರೀ ತಡವಾಗಿ ಈ ನಿರ್ಧಾರ ಕೈಗೊಂಡಿದ್ದೀರಿ. ಸೋಲುವ ಸಮಯದಲ್ಲಿ ನಿಮಗೆ ಜ್ಞಾನೋದಯವಾದಂತಿದೆ'' ಎಂದು ಕುಟುಕಿದರು.

Edited By : Vijay Kumar
PublicNext

PublicNext

10/01/2021 07:38 am

Cinque Terre

55.1 K

Cinque Terre

2

ಸಂಬಂಧಿತ ಸುದ್ದಿ