ಚಂಡೀಗಢ: ದೆಹಲಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಿಸಿ ಸದ್ಯ ಹರಿಯಾಣದ ಆಡಳಿತಾರೂಢ ಬಿಜೆಪಿಗೆ ತಟ್ಟಿದೆ.
ಹರಿಯಾಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಿದೆ. ಇದೇ ಮೊದಲ ಬಾರಿಗೆ ನಡೆದ ಮೂರು ನಗರಗಳ ಮೇಯರ್ ಸ್ಥಾನಗಳ ಚುನಾವಣೆ ಪೈಕಿ ಮೈತ್ರಿ ಕೂಟ ಕೇವಲ ಒಂದು ಸ್ಥಾನವನ್ನಷ್ಟೇ ಜಯ ಗಳಿಸಲು ಸಾಧ್ಯವಾಗಿದೆ.
ಅಂಬಾಲಾ, ಪಂಚಕುಲ ಮತ್ತು ಸೋನಿಪತ್ ನಗರಗಳ ಮೇಯರ್ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಪಂಚಕುಲದಲ್ಲಿ ಬಿಜೆಪಿ ತ್ರಾಸದಾಯಕ ಗೆಲುವು ದಾಖಲಿಸಿದರೆ, ಸೋನಿಪತ್‌ನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಉಳಿದಂತೆ ಹರಿಯಾಣ ಜನ್ ಚೇತನಾ ಪಕ್ಷ (ಎಚ್‌ಜೆಸಿಪಿ) ಅಂಬಾಲಾದ ಮೇಯರ್ ಸ್ಥಾನ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
PublicNext
31/12/2020 08:57 am