ಗಾಂಧಿನಗರ: ದೇಶದಲ್ಲಿ ಕೊರೊನಾ ರೂಪಾಂತರ ಮತ್ತಷ್ಟು ಆತಂಕ ಮೂಡಿಸಿದೆ. ಹೀಗಿದ್ದರೂ ಬಿಜೆಪಿ ಮುಖಂಡರೊಬ್ಬರು ಕೊರೊನಾ ನಿಯಮವನ್ನು ಗಾಳಿಗೆ ತೂರಿ ತಮ್ಮ ಸೋದರಳಿಯನ ಮದುವೆ ಮಾಡಿದ್ದಾರೆ.
ವಲ್ಸಾದ್ ಜಿಲ್ಲೆಯಲ್ಲಿ ನಡೆದ ಬಿಜೆಪಿ ಮುಖಂಡ ಚೇತನ್ ವಂದು ಅವರ ಸೋದರಳಿಯ ವಿವಾಹ ಸಮಾರಂಭದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಈ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಮದುವೆಯಲ್ಲಿ ಅತಿಥಿಗಳು ಡ್ಯಾನ್ಸ್ ಮಾಡುವುದನ್ನು ನೋಡಿದ ಪೊಲೀಸರು, "ನೂರಕ್ಕೂ ಹೆಚ್ಚು ಜನರು ಮಾಸ್ಕ್ ಇಲ್ಲದೆ ಒಟ್ಟುಗೂಡಿ, ಸಾಮಾಜಿಕ ಅಂತರವನ್ನು ಅನುಸರಿಸಲಿಲ್ಲ" ಎಂದು ಹೇಳಿದರು. ಮದುವೆಗೆ ಹಾಜರಾದ ಇನ್ನೂ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
PublicNext
29/12/2020 03:18 pm