ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಆಗಬೇಕೆಂಬ ಹಠ ನನಗಿಲ್ಲ: ನಿತೀಶ್

ಪಾಟ್ನಾ: 'ಸಿಎಂ ಆಗಲೇಬೇಕೆಂಬ ಹಠ ನನಗಿಲ್ಲ. ಜನತೆ ಕೊಟ್ಟ ಜನಾದೇಶಕ್ಕೆ ಅನುಗುಣವಾಗಿ ಯಾರು ಬೇಕಾದ್ರೂ ಸಿಎಂ ಆಗಬಹುದು. ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಅರುಣಾಚಲ ಪ್ರದೇಶದ ತನ್ನ ಆರು ಶಾಸಕರನ್ನು ಆಪೋಷಣ ಪಡೆದಿರುವ ಬಿಜೆಪಿ ವಿರುದ್ಧ ಜೆಡಿಯು ಬಿಹಾರದಲ್ಲಿ ಇದೀಗ ತಿರುಗಿ ಬಿದ್ದಿದೆ. ಬಿಹಾರದ ಜೆಡಿಯು ನಾಯಕರು ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಈಗಗಾಲೇ ಬಿಜೆಪಿ ವಿರುದ್ಧ ಲವ್ ಜಿಹಾದ್ ಕುರಿತು ಅಪಸ್ವರ ಎತ್ತಿರುವ ಜೆಡಿಯು, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯ ಒತ್ತಡವನ್ನು ಹೆಚ್ಚಿಸುವ ರಣತಂತ್ರ ರೂಪಿಸಿರುವಂತೆ ಕಾಣುತ್ತಿದೆ.

ಇದೀಗ ಖುದ್ದು ನಿತೀಶ್ ಕುಮಾರ್ ಅವರೇ ಅಖಾಡಕ್ಕಿಳಿದಿದ್ದು, ನನಗೆ ಮುಖ್ಯಮಂತ್ರಿಯಾಗಲೇಬೇಕು ಎಂಬ ಹಠವಿಲ್ಲ ಎಂದು ಹೇಳುವ ಮೂಲಕ ಬಿಹಾರ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್ ನೀಡುವ ಸುಳಿವು ನೀಡಿದ್ದಾರೆ.

Edited By : Nagaraj Tulugeri
PublicNext

PublicNext

28/12/2020 11:11 am

Cinque Terre

59.35 K

Cinque Terre

2

ಸಂಬಂಧಿತ ಸುದ್ದಿ