ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹನುಮ ಹುಟ್ಟಿದ ದಿನ ಗೊತ್ತಾ ನಿಂಗೆ? ಸುಮ್ನೆ ಊಟ ಮಾಡು - ಮಾಂಸಾಹಾರ ಭೋಜನ ಸವಿದ ಸಿದ್ದು

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಗೆ ಬೇಟಿ ನೀಡಿರುವ ಸಿದ್ದರಾಮಯ್ಯ ಆಪ್ತರು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಈಗ ಮೈಸೂರಿನ ಸಿದ್ದರಾಮನ ಹುಂಡಿಗೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ಹನುಮ ಜಯಂತಿಯ ಬಗ್ಗೆ ತಮ್ಮ ಮನದ ಮಾತನ್ನು ಹೇಳಿದ್ದಾರೆ.

ಕಾರ್ಯಕರ್ತರ ಜೊತೆ ನಾನ್ ವೆಜ್ ಊಟಕ್ಕೆ ಕುಳಿತಾಗ ಸಿದ್ದರಾಮಯ್ಯಗೆ ಕಾರ್ಯಕರ್ತ ಅಭಿಮಾನಿಗಳು "ಅಣ್ಣಾ, ಇವತ್ತು ಹನುಮ ಜಯಂತಿ" ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾವ ಜಯಂತಿ? ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಸ್ಪಷ್ಟವಾಗಿ ಗೊತ್ತಿದ್ರೆ ಜಯಂತಿ ಆಚರಣೆ ಮಾಡು ಇಲ್ಲದಿದ್ರೆ ಚಿಕನ್ ತಿನ್ನಬಹುದು. ಗೊತ್ತಿಲ್ಲ ತಾನೆ? ಏನೂ ಆಗಲ್ಲ ತಿನ್ನು ಎಂದು ಹೇಳಿದ್ದಾರೆ.

ಈ ಮೊದಲು ನಾನು ದಿನಕ್ಕೆ 2 ಬಾರಿ ನಾನ್ ವೆಜ್ ಊಟ ಮಾಡುತ್ತಿದ್ದೆ. ಆಂಜಿಯೋಗ್ರಾಮ್ ಆದ ಬಳಿಕ ಈಗ ವಾರಕ್ಕೆ 3 ದಿನವಷ್ಟೇ ನಾನ್ ವೆಜ್ ಊಟ ಮಾಡುತ್ತಿದ್ದೇನೆ ಎಂದು ತಮ್ಮ ಆಹಾರದ ಕ್ರಮದ ಬಗ್ಗೆ ಮಾತನಾಡಿದ್ದಾರೆ.

Edited By : Nagaraj Tulugeri
PublicNext

PublicNext

27/12/2020 05:16 pm

Cinque Terre

168.52 K

Cinque Terre

60

ಸಂಬಂಧಿತ ಸುದ್ದಿ