ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯಪ್ರದೇಶದಲ್ಲಿ ಒತ್ತಾಯದ ಮತಾಂತರಕ್ಕೆ 1-5 ವರ್ಷ ಜೈಲು

ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020ಗೆ ಅನುಮೋದನೆ ದೊರೆತಿದೆ. ಈ ಮಸೂದೆ ಅಡಿಯಲ್ಲಿ ಒತ್ತಾಯದ ಧಾರ್ಮಿಕ ಮತಾಂತರಕ್ಕೆ 1-5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ ಕನಿಷ್ಠ 2-10 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 50,000 ರೂ. ಜುಲ್ಮಾನೆ ಹಾಕಲಾಗುತ್ತದೆ.

ಹೊಸ ಮಸೂದೆಯಡಿಯಲ್ಲಿ ಯಾರೊಬ್ಬರ ಮೇಲೆ ಧಾರ್ಮಿಕ ಮತಾಂತರವನ್ನು ಒತ್ತಾಯಿಸಿದರೆ 1-5 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

26/12/2020 03:08 pm

Cinque Terre

48.97 K

Cinque Terre

1

ಸಂಬಂಧಿತ ಸುದ್ದಿ