ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ 1.5 ಕೋಟಿ ಬಹುಮಾನ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಜಕ್ಕೂ ಗ್ರೇಟ್ ಅನಿಸುತ್ತಿದ್ದಾರೆ. ತಮ್ಮ ದಿಟ್ಟ ನಿಲುವಿನಿಂದ ಕೆಲವರ ಕೆಂಗಣ್ಣಿಗೂ ಗುರಿ ಆಗುತ್ತಾರೆ. ಆದರೆ ಈಗ ಮಾಡಿರುವ ಕೆಲಸ ಎಂತಹವರೂ ಮೆಚ್ಚುವಂತದ್ದೇ ಆಗಿದೆ. ಅದೇನೂ ಅನ್ನೋದು ಹೇಳ್ತೀವಿ ಬನ್ನಿ.

ದೇಶದ ಯಾವುದೇ ರಾಜ್ಯದಲ್ಲೂ ತೆಗೆದುಕೊಳ್ಳಿ ಕ್ರೀಡಾ ಪಟುಗಳು ಹೆಚ್ಚು ಕಡಿಮೆ ನಿರ್ಲಕ್ಷಕ್ಕೇನೆ ಒಳಗಾಗಿರುತ್ತಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಲಿಂಪಿಕ್ಸ್ ನಲ್ಲಿ ಕೇವಲ ಬೆಳ್ಳಿ ಪದಕವನ್ನ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಬರೊಬ್ಬರಿ 1.5 ಕೋಟಿ ನಗದು ಬಹುಮಾನ ಕೊಟ್ಟು ಗೌರವಿಸಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತದ ಬಹುಮಾನವನ್ನ ಸ್ವೀಕರಿಸಿರೋ ಮೀರಾಬಾಯಿ ಚಾನು ಕೂಡ ಖುಷಿಯಾಗಿದ್ದಾರೆ. ಆಶ್ಚರ್ಯವನ್ನೂ ಪಟ್ಟಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ನಿರೀಕ್ಷೆ ಮಾಡಿರಲಿಲ್ಲ ಅಂತಲೇ ಹೇಳಿದ್ದಾಳೆ.

ಅಂದ್ಹಾಗೆ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ ನಲ್ಲಿಯೇ ಈ ವಿಶೇಷ ಬಹುಮಾನ ವಿತರಣೆ ಕಾರ್ಯಕಮ ನಡೆದಿದೆ.

Edited By :
PublicNext

PublicNext

26/12/2021 09:23 am

Cinque Terre

58.02 K

Cinque Terre

4

ಸಂಬಂಧಿತ ಸುದ್ದಿ