ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟ ಮಾತಿನಂತೆ ನಡೆದುಕೊಂಡ ಪಂಜಾಬ್ ಸಿಎಂ..

ಚಂಡೀಗಢ: ಕಳೆದ ತಿಂಗಳು ಒಲಿಂಪಿಕ್ಸ್ ಪದಕ ವಿಜೇತರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ತಾವೇ ಅಡುಗೆ ಮಾಡಿ ಬಡಿಸುವುದಾಗಿ ಪಂಜಾಬ್ ಸಿಎಂ ಭರವಸೆ ನೀಡಿದ್ದರು. ಸದ್ಯ ಕೊಟ್ಟ ಮಾತಿನಂತೆ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬುಧವಾರ ಖುದ್ದಾಗಿ ತಾವೇ ಅಡುಗೆ ಮಾಡಿ ಕ್ರಿಡಾಪಟುಗಳಿಗೆ ಉಣಬಡಿಸಿದ್ದರು.

ಒಲಿಂಪಿಕ್ಸ್ ಪದಕ ವಿಜೇತರು ಹಾಗೂ ಸ್ಪರ್ಧಿಗಳಿಗೆ ಔತಣಕೂಟ ಏರ್ಪಡಿಸಿದ್ದಕ್ಕಾಗಿ ಹಾಗೂ ಕ್ರೀಡಾಳುಗಳಿಗೆ ಅತ್ಯುನ್ನತ ಗೌರವ ತೋರಿಸಿದ್ದಕ್ಕಾಗಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಯಾವುದೇ ಮುಖ್ಯಮಂತ್ರಿಯೊಬ್ಬರು ಕ್ರೀಡಾಳುಗಳಿಗಾಗಿ ಇಷ್ಟೊಂದು ಸಮಯವನ್ನು ಮೀಸಲಿರಿಸಿರುವುದನ್ನು ಕಂಡು ನನಗೆ ತುಂಬಾ ಖುಷಿಯಾಗಿದೆ. ಅವರು ಕ್ರೀಡೆ ಮತ್ತು ಕ್ರೀಡಾಳುಗಳನ್ನು ಎಷ್ಟು ಪ್ರೀತಿಸುತ್ತಾರೆಂಬುದನ್ನು ಇದು ಸೂಚಿಸುತ್ತದೆ. ಇಷ್ಟೊಂದು ಗೌರವ ನೀಡಿದ್ದಕ್ಕಾಗಿ ಅವರಿಗೆ ಬಹಳಷ್ಟು ಧನ್ಯವಾದಗಳು,'' ಎಂದಿದ್ದಾರೆ.

"ನಾನು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸಿದ್ದೆ. ಸಂಜೆ 5 ಗಂಟೆಯೊಳಗಾಗಿ ಎಲ್ಲವೂ ಸಿದ್ಧವಾಗಿತ್ತು ನಂತರ ಕೆಲವೊಂದು ಅಂತಿಮ ಸ್ಪರ್ಶ ಬಾಕಿಯಿತ್ತು. ಪ್ರತಿ ಕ್ಷಣವನ್ನೂ ಆನಂದಿಸಿದೆ,'' ಎಂದು ಅಮರಿಂದರ್ ಸಿಂಗ್ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ಅವರು (ಕ್ರೀಡಾಳುಗಳು) ನಮಗೆ ಖ್ಯಾತಿ ತರಲು ಎಷ್ಟೊಂದು ಶ್ರಮವಹಿಸುತ್ತಾರೆ, ಅದಕ್ಕೆ ಹೋಲಿಸಿದಾಗ ನಾನು ಮಾಡಿದ್ದು ಏನೇನೂ ಅಲ್ಲ,'' ಎಂದರು.

ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಹೊರತಾಗಿ ಒಲಿಂಪಿಕ್ಸ್ ಕಂಚು ವಿಜೇತ ಹಾಕಿ ತಾರೆಯರಾದ ಮನಪ್ರೀತ್ ಸಿಂಗ್ , ಹರ್ಮನ್ಪ್ರೀ ತ್ ಸಿಂಗ್ , ಮನದೀಪ್ ಸಿಂಗ್, ಹರ್ದಿಕ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸಂಶೇರ್ ಸಿಂಗ್, ದಿಲ್ ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ವರುಣ್ ಕುಮಾರ್ ಹಾಗೂ ಸಿಮ್ರನ್ಜಿತ್ ಸಿಂಗ್ ಔತಣಕೂಟದಲ್ಲಿ ಭಾಗವಹಿಸಿದ್ದರು.

Edited By : Nirmala Aralikatti
PublicNext

PublicNext

09/09/2021 12:53 pm

Cinque Terre

67.13 K

Cinque Terre

2

ಸಂಬಂಧಿತ ಸುದ್ದಿ