ಬೆಂಗಳೂರು: ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಅವರು ಮಠಾಧಿಪತಿ ಆಗಲು ನಿರ್ಧರಿಸಿದ್ದಾರೆ. ಅವರು ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಆಗಲಿದ್ದಾರೆ.
ಮೇ 6ಕ್ಕೆ ಸನ್ಯಾಸ ದೀಕ್ಷೆ ಪಡೆಯಲಿದ್ದು ಅದಕ್ಕಾಗಿ ತಯಾರಿಗಳೂ ನಡೆದಿವೆ. ಇದಾದ ನಂತರ ಮೇ 15ರಂದು ಪಟ್ಟಾಭಿಷೇಕ ನಡೆಯಲಿದೆ. ರಾಜರಾಜೇಶ್ವರಿ ಜಯೇಂದ್ರ ಸ್ವಾಮೀಜಿ ದೀಕ್ಷೆ ನೀಡಲಿದ್ದಾರೆ. ಪುಟ್ಟಸ್ವಾಮಿ ಸದ್ಯ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
82 ವರ್ಷ ವಯಸ್ಸಿನ ಮಾಜಿ ಸಚಿವರು ನೆಲಮಂಗಲ ಸಮೀಪದ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದ ಮೊದಲ ಪೀಠಾಧಿಪತಿ ಆಗಲು ನಿರ್ಧಾರ ಕೈಗೊಂಡಿದ್ದಾರೆ. ಅವರ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
PublicNext
06/04/2022 07:59 am