ಕಲಬುರಗಿ : ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಸಾಕಷ್ಟು ವಿವಾದವನ್ನು ಸೃಷ್ಠಿಸಿದೆ.
ಹೌದು ಹಿಜಾಬ್ ವಿವಾದವನ್ನು ಮಠಗಳಿಗೆ ತಂದು ನಿಲ್ಲಿಸಿ ಸಿದ್ದರಾಮಯ್ಯನವರ ಹೇಳಿಕೆ ಖಂಡನೀಯ, ಅವರು ಮಠಾಧೀಶರ ಸಮೂಹವನ್ನ ಅವಮಾನಿಸಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕೂಡಲೇ ಅವರು ಮಠಾಧೀಶರ ಬಳಿ ಕ್ಷಮೆ ಕೇಳಬೇಕು. ಹಿಜಾಬ್ ಕಡ್ಡಾಯವಲ್ಲ ಎಂದು ಹೈ ಕೊರ್ಟ್ ತೀರ್ಪು ನೀಡಿತ್ತು. ಹಿಂದು ಧರ್ಮವನ್ನು, ಸಂಸ್ಕೃತಿಯನ್ನು ಹಿಯಾಳಿಸುವುದು ಅವರ ಕೆಟ್ಟ ಚಟ ಎಂದು ವಾಗ್ದಾಳಿ ನಡೆಸಿದರು.
ಹಿಂದು ಮಠಾಧೀಶರನ್ನು ಅವಮಾನ ಮಾಡಿರುವ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
PublicNext
25/03/2022 03:31 pm