ಬಾಗಲಕೋಟೆ: ಪಿಎಫ್‌ಐ,ಸಿಎಫ್‌ಐ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿವೆ. ಈ ಹಿಂದೇನೆ ಕೇರಳದ ಸಿಎಂ ಪ್ರಧಾನಿ ಮನ್‌ಮೋಹನ್ ಸಿಂಗ್ ಗೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಸಂಘಟನೆಗಳು ಮುಂದೊಂದಿನ ದೇಶಕ್ಕೆ ಮಾರಕವಾಗಲಿವೆ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಕ್ಕೆ ಮಾತನಾಡಿರೋ ಪ್ರಮೋದ್ ಮುತಾಲಿಕ್,ಈ ಸಂಘಟನೆಗಳು ಇಡೀ ದೇಶಕ್ಕೆ ಮಾರಕವಾಗಿವೆ. ಇವುಗಳನ್ನ ಸರ್ಕಾರ ಬ್ಯಾನ್ ಮಾಡಲೇಬೇಕಿದೆ. ರಾಜ್ಯದಲ್ಲಿ ನಡೆದ 22 ಕೊಲೆಗಳಲ್ಲಿ 9 ಕೊಲೆಗಳಲ್ಲಿ ಪಿಎಫ್‌ಐ ನಂಟಿದೆ ಅಂತಲೇ ಮುತಾಲಿಕ್ ವಿವರಿಸಿದ್ದಾರೆ.
PublicNext
19/02/2022 06:19 pm