ನವದೆಹಲಿ: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಹೊನ್ನಾಳಿಯಲ್ಲೂ ಇಂತಹ ಕಹಿ ಘಟನೆ ನಡೆದಿದೆ. ನಾನು ಮಧ್ಯಪ್ರವೇಶ ಮಾಡಿ ಶಾಂತಿ ಕಾಪಡಲು ಮನವಿ ಮಾಡಿದ್ದೇನೆ. ಕರ್ನಾಟಕ ಶಾಂತಿಗೆ ಹೆಸರಾದ ರಾಜ್ಯ. ಹಿಜಾಬ್-ಕೇಸರಿ ಸಂಘರ್ಷದ ಬದಲು ಎಲ್ಲರೂ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಸಮವಸ್ತ್ರ ಧರಿಸಲು ಹಿಂದೆ ಕೇರಳ ಹೈಕೋರ್ಟ್ ಹೇಳಿದೆ. ನಮ್ಮ ಸರ್ಕಾರ ಕೂಡಾ ಹೇಳಿದೆ. ಆ ಆದೇಶಗಳನ್ನು ನಾವು ಪಾಲಿಸಬೇಕು. ಹೈಕೋರ್ಟ್ ಹೇಳುವುದನ್ನು ನಾವು ಕೇಳಬೇಕು. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
PublicNext
08/02/2022 08:40 pm