ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನೊಬ್ಬರ ಆರಾಧನಾ ವ್ಯವಸ್ಥೆ ಬದಲಿಸದೇ ಮನುಷ್ಯರಾಗೋಣ: ಮೋಹನ್ ಭಾಗವತ್

ನವದೆಹಲಿ: ಯಾರನ್ನೂ ಮತಾಂತರಗೊಳಿಸುವ ಅಗತ್ಯವಿಲ್ಲ, ಭಾರತವನ್ನು “ವಿಶ್ವ ಗುರು” ಮಾಡಲು ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒತ್ತಿ ಹೇಳಿದ್ದಾರೆ.

ಛತ್ತೀಸ್‌ಗಢದ ಘೋಷ್‌ಶಿವಿರ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಯಾರನ್ನೂ ಮತಾಂತರ ಮಾಡಬೇಕಿಲ್ಲ. ಆದರೆ ಬದುಕುವುದು ಹೇಗೆಂದು ಕಲಿಸಬೇಕು, ಇಡೀ ಜಗತ್ತಿಗೆ ಅಂತಹ ಪಾಠವನ್ನು ನೀಡಲು ನಾವು ಭಾರತ ದೇಶದಲ್ಲಿ ಹುಟ್ಟಿದ್ದೇವೆ. ನಮ್ಮ ಪಂಥವು ಒಳ್ಳೆಯದನ್ನು ಮಾಡುತ್ತದೆ. ಯಾರ ಆರಾಧನಾ ವ್ಯವಸ್ಥೆಯನ್ನು ಬದಲಾಯಿಸದೆ ಮನುಷ್ಯರಾಗಿರೋಣ” ಎಂದರು.

“ಯಾರಾದರೂ ರಾಗಕ್ಕೆ ಭಂಗ ತರಲು ಪ್ರಯತ್ನಿಸಿದರೆ ದೇಶದ ಲಯವನ್ನು ಸರಿಪಡಿಸಲಾಗುತ್ತದೆ. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಸಮನ್ವಯದಿಂದ ಒಟ್ಟಾಗಿ ಮುನ್ನಡೆಯುವುದು ಅಗತ್ಯವಾಗಿದೆ” ಎಂದು ಅವರು ಹೇಳಿದರು.

Edited By : Nagaraj Tulugeri
PublicNext

PublicNext

20/11/2021 11:56 am

Cinque Terre

54.86 K

Cinque Terre

5