ಕೋಲಾರ: ನವೆಂಬರ್ 13ರಂದು ಕೋಲಾರದಲ್ಲಿ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಕೈಗೊಳ್ಳಲಾದ ಕೋಲಾರ ಬಂದ್ ಕಾರ್ಯಕ್ರಮಕ್ಕೆ ಆಗಮಿಸದಂತೆ ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಕೋರ್ಟ್ ಸ್ಟೇ ಆರ್ಡರ್ ಕೊಟ್ಟಿತ್ತು. ಆದರೂ ಅದನ್ನು ಉಲ್ಲಂಘಿಸಿ ಆಗಮಿಸಿದ ಅವರನ್ನು ನಗರದ ರಾಮಸಂದ್ರ ಗಡಿಭಾಗದಲ್ಲಿ ಪೊಲೀಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಇದರಿಂದ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಪ್ರಮೋದ್ ಮುತಾಲಿಕ್ ಆಕ್ರೋಶಗೊಂಡಿದ್ದಾರೆ. ಅಂದು ನಡೆದ ಘಟನೆ ಅತ್ಯಂತ ಕ್ರೂರವಾಗಿತ್ತು. ಐದು ನಿಮಿಷದಲ್ಲಿ ಪೊಲೀಸರು ಬರದೇ ಇದ್ದಿದ್ದರೇ ಬಸ್ ಅನ್ನು ಸುಟ್ಟು ಹಾಕುತ್ತಿದ್ದರು. 47 ಜನ ಹಿಂದೂ ಕಾರ್ಯಕರ್ತರು ಅಸು ನೀಗ್ತಿದ್ರು ಎಂದು ರಾಮಸಂದ್ರ ಗಡಿಯಲ್ಲಿ ಪೊಲೀಸ್ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದರು.
ಆದ್ರೆ ಇವತ್ತು ತೆಗೆದುಕೊಂಡಿರುವ ಸರ್ಕಾರದ ಕ್ರಮ ಸರಿಯಲ್ಲ. ಹಿಂದೂ ಸಮಾಜದ ಮೇಲೆ ದೌರ್ಜನ್ಯ ನಡೆದಿದೆ. ಈ ಕುರಿತು ಪ್ರತಿಭಟನೆ ಸಹ ಮಾಡಬಾರದಾ ಎಂದು ಸರ್ಕಾರಕ್ಕೆ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡುವುದಕ್ಕೂ ಸಹ ಬಿಡ್ತಾ ಇಲ್ಲ. ಸರ್ಕಾರ ನಮ್ಮನ್ನ ತಡಿಯೋದು ಸರಿಯಲ್ಲ ಎಂದು ಬಂಧನಕ್ಕೂ ಮುನ್ನ ಅಸಮಾಧಾನ ಹೊರ ಹಾಕಿದರು.
PublicNext
18/11/2021 02:43 pm