ಚಿತ್ರದುರ್ಗ: ಹಲವು ಆಮಿಷಗಳನ್ನು ಒಡ್ಡಿ ಮತಾಂತರ ಮಾಡಿಸಲಾಗಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕುಟುಂಬಗಳ ಸದಸ್ಯರು ವಾಪಸ್ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಇವರಿಗಾಗಿ ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ 'ಘರ್ ವಾಪಸಿ' ಹಮ್ಮಿಕೊಳ್ಳಲಾಗಿತ್ತು.
ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನಿಗೆ ವಕ್ಕರಿಸಿದ್ದ ಕ್ಯಾನ್ಸರ್ ರೋಗವನ್ನೇ ಬಂಡವಾಳ ಮಾಡಿಕೊಂಡು ಪ್ರದೀಪ್ ಎಂಬವರ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಮತಾಂತರವಾಗಿ ಎರಡು ವರ್ಷ ಕಳೆದರೂ ಸಹ ಅವರ ತಂದೆಗೆ ರೋಗ ನಿವಾರಣೆ ಆಗಲಿಲ್ಲ. ಹೀಗಾಗಿ ಇಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಮ್ಮುಖದಲ್ಲಿ ನಾಲ್ಕು ಕುಟುಂಬಗಳು ಸ್ವಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ.
ಗ್ರಾಮದ ದೇವಸ್ಥಾನದಲ್ಲಿ ಕೇಸರಿ ಶಾಲು ಹಾಕುವ ಮೂಲಕ ಮತಾಂತರ ಹೊಂದಿದ್ದ ಎಲ್ಲರನ್ನೂ ವಾಪಸ್ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, ಮತಾಂತರವಾಗಿದ್ದ ನನ್ನ ತಾಯಿ ಕೂಡ ವಾಪಸ್ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಮತಾಂತರದಲ್ಲಿ ತೊಡಗಿರುವ ಕ್ರೈಸ್ತ ಮಿಶನರಿಗಳ ವಿರುದ್ಧ ಗುಡುಗಿದ್ದೇನೆ. ನಾವು ಯಾರನ್ನೂ ಒತ್ತಾಯ ಮಾಡಿಲ್ಲ. ಬಿಟ್ಟು ಹೋದವರು ಸ್ವಯಂ ಪ್ರೇರಣೆಯಿಂದ ವಾಪಸ್ ಬಂದಿದ್ದಾರೆ. ಈ ವಿಚಾರ ಇಟ್ಟುಕೊಂಡು ನಾನು ರಾಜಕೀಯ ಮಾಡೋದಿಲ್ಲ ಎಂದಿದ್ದಾರೆ.
PublicNext
11/10/2021 08:25 am