ಕೊಲ್ಲೂರು: ಉಡುಪಿಯ ವಿವಿಧ ದೇವಾಲಯಗಳಿಗೆ ಇವತ್ತು ಸಚಿವ ಅಶ್ವತ್ಥನಾರಾಯಣ ಭೇಟಿ ನೀಡಿದರು.ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಅಶ್ವತ್ಥನಾರಾಯಣ ನಿನ್ನೆ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.ಎರಡು ದಿನ ಉಡುಪಿ ಪ್ರವಾಸದಲ್ಲಿರುವ ಸಚಿವರು ಇವತ್ತು ಕುಟುಂಬ ಸಮೇತರಾಗಿ ಕುಂದಾಪುರ ತಾಲೂಕಿನ ಕಮಲಶಿಲೆ ದೇವಸ್ಥಾನದಲ್ಲಿ ಯಾಗದಲ್ಲಿ ಪಾಲ್ಗೊಂಡರು.ಇಲ್ಲಿನ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸಮ್ಮುಖದಲ್ಲಿ ಪೂಜೆ,ಚಂಡಿಕಾಯಾಗ ನಡೆಸಿದರು.ಬಳಿಕ ಸಚಿವರು ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಕ್ಷೇತ್ರಕ್ಕೂ ಭೇಟಿ ನೀಡಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು.
PublicNext
26/09/2021 12:24 pm