ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ ಬಿಜೆಪಿ ಕಾರ್ಯಕಾರಿಣಿಯಲ್ಲಿ SDPI ನಿಷೇಧ-ಗಲಭೆಗಳ ಬಗ್ಗೆ ಸಿ.ಟಿ.ರವಿ ಗರಂ.

ದೇವನಹಳ್ಳಿ: ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಪಾತ್ರವಿದೆ ಎಂಬ ಮಾಹಿತಿ ಬಂದಿದೆ. ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಮೌಲ್ವಿಗಳ ಪಾತ್ರ ಸಾಭೀತಾಗಿದೆ. ಈ ಬಗ್ಗೆ ತನಿಖೆ ನಡೆದರೆ ತಪ್ಪೇನು. ತಪ್ಪು ಮಾಡಿದ್ದರೆ ಅಪರಾಧಿಯಾಗ್ತಾರೆ. ಇಲ್ಲವಾದ್ರೆ ನಿರಪರಾಧಿ ಆಗ್ತಾರೆ. ಇಂತವರನ್ನ ಕಾಂಗ್ರೆಸ್ ಪಕ್ಷ ತಲೆ ಮೇಲೆ ಕೂರಿಸಿ ಕೊಂಡಿರಬಹುದು.ಆದರೆ, ನಾವು ಯಾರನ್ನು ತಲೆ ಮೇಲೆ ಕೂರಿಸಿಕೊಂಡಿಲ್ಲ ಕೂರಿಸಿಕೊಳ್ಳೋದಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಡಕ್ ಆಗಿಯೇ ಹೇಳಿದ್ದಾರೆ.

ರಾಜ್ಯದಲ್ಲಿ SDPI , PFI ಬ್ಯಾನ್ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿ, ಬ್ಯಾನ್ ಮಾಡಲು ಎಲ್ಲಾ ರೀತಿ ಸಿದ್ಧತೆ ಶುರುವಾಗಿದೆ.

ಸರ್ಕಾರ ಈ ಬಗ್ಗೆ ಎಲ್ಲಾ ಸಾಕ್ಷ್ಯಾಧಾರ ಕಲೆ ಹಾಕ್ತಿದೆ. ಕಳ್ಳನ ಹೆಂಡತಿ ಯಾವತ್ತಿದ್ರು ಡ್ಯಾಶ್... ಡ್ಯಾಶ್... ಡ್ಯಾಶೆ... ಆಗ್ತಾಳೆ. ಭಯೋತ್ಪಾದನೆ ಮಾಡ್ತಾ ಮಾಡ್ತಾ ಶಾಂತಿ.. ಶಾಂತಿ ಅಂತ ಹೇಳಲು ಸಾಧ್ಯವಿಲ್ಲ.ಮುಖವಾಡ ಯಾವತ್ತಿದ್ದರೂ ಕಳಚಿ ಬೀದ್ದೆ ಬೀಳುತ್ತದೆ ಎಂದು SDPI & PFI ಸಂಘಟನೆಗಳ ವಿರುದ್ಧ ಪರೋಕ್ಷವಾಗಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ದೇವನಹಳ್ಳಿಯ ಬಿಜೆಪಿ ವಿಭಾಗೀಯ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ ಭಾಗವಹಿಸಿ ಸಿ.ಟಿ.ರವಿ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Edited By :
PublicNext

PublicNext

21/04/2022 02:35 pm

Cinque Terre

92.05 K

Cinque Terre

9