ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ರಾಜೀನಾಮೆ ಕೊಟ್ಟರೆ ಪಕ್ಷ ಮುಳುಗಲ್ಲ; ಜಿ. ಎಂ. ಸಿದ್ದೇಶ್ವರ್

ರಾಜೀನಾಮೆ ಕೊಟ್ಟರೆ ಪಕ್ಷ ಮುಳುಗಲ್ಲ. 11 ಕೋಟಿ ಜನರು ಬಿಜೆಪಿಯಲ್ಲಿದ್ದಾರೆ. ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ನಾನು ಇದ್ದೇನೆ. ರಾಜೀನಾಮೆ ಕೊಟ್ಟಾಕ್ಷಣ ಸ್ವೀಕೃತ ಆಗಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಸರ್ಕಾರ ಕ್ರಮ ಕೈಗೊಂಡಿದೆ. ಈ ವಿಚಾರದಲ್ಲಿ ಯುವ ಮೋರ್ಚಾ ಸದಸ್ಯರ ರಾಜೀನಾಮೆ ಪ್ರಶ್ನೆಯೇ ಉದ್ಭವಿಸದು ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದರು.

ಮಾಧ್ಯಮದವರ ಜೊತೆ‌‌ ಮಾತನಾಡಿದ ಅವರು, ನಮಗ್ಯಾರಿಗೂ ರಾಜೀನಾಮೆ‌ ಕೊಟ್ಟಿಲ್ಲ.‌ ಟಿವಿಯಲ್ಲಿ ಬರುತ್ತೇವೆ ಎಂಬ ಕಾರಣಕ್ಕೆ ಕೆಲವರು ರಾಜೀನಾಮೆ‌ ನಾಟಕ‌ ಆಡಿರಬಹುದು. ಈ ಕಾರಣಕ್ಕೆ ಟಿವಿ ಮುಂದೆ ಹೋಗಿದ್ದಾರೆ ಎಂದರು.

ಹಾಗೆಯೇ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವುದಾಗಿ ಹೇಳಿದ್ದ ರೇಣುಕಾಚಾರ್ಯ ಅಭಿಪ್ರಾಯವೇ ಬೇರೆ ಎಂದರು.

Edited By :
PublicNext

PublicNext

30/07/2022 06:32 pm

Cinque Terre

52.15 K

Cinque Terre

3

ಸಂಬಂಧಿತ ಸುದ್ದಿ