ಭಾರತದಲ್ಲಿ ಅಳಿವಿನಂಚಿನಲ್ಲಿದೆ ಎಂದು ವರದಿಯಾದ ಏಳು ದಶಕಗಳ ನಂತರ, ಚಿರತೆಯನ್ನು ಶನಿವಾರ ದೇಶದಲ್ಲಿ ಮತ್ತೆ ಪರಿಚಯಿಸಲಾಗಿದೆ.
'ಪ್ರಾಜೆಕ್ಟ್ ಚೀತಾ' ಅಡಿಯಲ್ಲಿ, ಕೇಂದ್ರ ಸರ್ಕಾರವು ಎಂಟು ಆಫ್ರಿಕನ್ ಚಿರತೆಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಐದು ಗಂಡು ಮತ್ತು ಮೂರು ಹೆಣ್ಣು ಚಿರತೆಗಳಿವೆ.
ಮತ್ತೊಂದು ವಿಶೇಷ ಅಂದ್ರೆ ಇಂದು ಪ್ರಧಾನಿ ಮೋದಿ ಜನ್ಮ ದಿನ ಈ ದಿನದಂತೆ 8 ಚೀತಾ ಭಾರತಕ್ಕೆ ಆಗಮಿಸಿರುವುದು ಇತಿಹಾಸವಾಗಿದೆ.ಇನ್ನು ಭಾರತಕ್ಕೆ ಬಂದ ಈ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಇದೇ ಉದ್ಯಾನವನಕ್ಕೆ ಬೀಡಲು ಕಾರಣ ಇಲ್ಲಿಯ ವಾತಾವರಣ ಚಿರತೆಗಳ ಬೆಳವಣಿಗೆಗೆ ಯೋಗ್ಯವಾಗಿದೆ.
ದೊಡ್ಡ ಬೆಕ್ಕು ಎಂದು ಕರೆಯಲ್ಪಡುವ ಚಿರತೆ ಭಾರತದಲ್ಲಿ ಮತ್ತೆ ತನ್ನ ಸಂತತಿಯನ್ನು ಉಳಿಸಿ ಬೆಳೆಸಲೆಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಕಾರ್ಯಪ್ರವೃತವಾಗಿದೆ.
ಇನ್ನು ಚಿರತೆಗಳ ಈ ಆಗಮನವನ್ನು ಗುರುತಿಸಲು, ಪ್ರಧಾನಿ ನರೇಂದ್ರ ಮೋದಿ 'ಧೈರ್ಯಶಾಲಿಗಳ ಭೂಮಿ'ಯಿಂದ ಸದ್ಭಾವನಾ ರಾಯಭಾರಿಗಳಿಗೆ ಆತಿಥ್ಯ ಎಂದು ಕರೆದು ಪ್ರಾಜೆಕ್ಟ್ ಚಿತಾಕ್ಕೆ ಚಾಲನೆ ನೀಡಿದರು.
ಹಾಗಾದರೆ ಪ್ರಾಜೆಕ್ಟ್ ಚೀತಾ ಅಂದರೆ ಏನು?
ಪ್ರೊಜೆಕ್ಟ್ ಚೀತಾ ಅಂದರೆ, ಚಿರತೆಗಳನ್ನು ಭಾರತಕ್ಕೆ ಮರುಪರಿಚಯಿಸಲು ಪ್ರಾಯೋಗಿಕ ಕಾರ್ಯಕ್ರಮವಾಗಿ ಜನವರಿ 2020 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಅನುಮೋದಿಸಿತು. ಇದು ಚೀತಾವನ್ನು ಮರಳಿ ತರುವ ಪರಿಕಲ್ಪನೆಯನ್ನು 2009 ರಲ್ಲಿ ಭಾರತೀಯ ಸಂರಕ್ಷಣಾಕಾರರು, ಚೀತಾ ಕನ್ಸರ್ವೇಶನ್ ಫಂಡ್ (CCF), ನಮೀಬಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಲಾಭರಹಿತ ಸಂಸ್ಥೆ ಮುಂದಿಟ್ಟರು. ಈ ಸಂಸ್ಥೆ ಇದು ಕಾಡಿನಲ್ಲಿ ದೊಡ್ಡ ಬೆಕ್ಕನ್ನು ಉಳಿಸುವ ಮತ್ತು ಪುನರ್ವಸತಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. .
ಜುಲೈ 2020 ರಲ್ಲಿ, ಭಾರತ ಮತ್ತು ನಮೀಬಿಯಾ ಗಣರಾಜ್ಯವು ಈ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದವು. ನಮೀಬಿಯಾ ಸರ್ಕಾರವು ಕಾರ್ಯಕ್ರಮವನ್ನು ಪ್ರಾರಂಭಿಸಲು ಭಾರತಕ್ಕೆ ಎಂಟು ಬೆಕ್ಕುಗಳನ್ನು ದಾನ ಮಾಡಲು ಒಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾದ ಚಿರತೆಯನ್ನು ಭಾರತದಲ್ಲಿ ಅಥವಾ ಜಗತ್ತಿನ ಎಲ್ಲಿಯಾದರೂ ಪರಿಚಯಿಸಿದ್ದು ಇದೇ ಮೊದಲು. ಹೀಗಾಗಿ ಪ್ರೊಜೆಕ್ಟ್ ಚೀತಾ ಇಡೀ ಭಾರತೀಯರು ಕುತೂಹಲದಿಂದ ಕಾಯುವಂತೆ ಮಾಡಿತ್ತು.
ಇನ್ನು ಗಮನಾರ್ಹ ಸಂಗತಿ ಅಂದ್ರೆ ದೇಶದಿಂದ ಚೀತಾಗಳು ಅಳಿದು ಹೋಗಿವೆ ಎಂದು 1952ರಲ್ಲಿ ಘೋಷಿಸಲಾಗಿತ್ತು. ಇದು ದುರದೃಷ್ಟಕರ ಸಂಗತಿ.. ಇದಾದ ಬಳಿಕವೂ ಹಲವು ದಶಕಗಳಿಂದ ಚೀತಾಗಳಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿರಲಿಲ್ಲ. ಆದರೆ, ನಾವಿಂದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳನ್ನು ಪುನರ್ವಸತಿ ಮಾಡಲು ಪ್ರಾರಂಭಿಸಿದ್ದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಲ್ಲಿ ಇಂದು ಭಾರತದಲ್ಲಿ ಚಿರತೆಯ ಸಂತತಿಗಳನ್ನು ಉಳಿಸಿ ಬೆಳಿಸುವ ಕನಸು ನನಸಾಗಿದೆ. ಚಿರತೆ ಒಂದು ಪ್ರಮುಖ ಹುಲ್ಲುಗಾವಲು ಜಾತಿಯ ಪರಭಕ್ಷಕ ಪ್ರಾಣಿಯಾಗಿದೆ.
PublicNext
17/09/2022 07:01 pm