ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೇ ? ಈಗ ಇದೇ ಆರೋಪದ ಮೇಲೆನೆ ಕೋರ್ಟ್‌ನಿಂದ ವಾರೆಂಟ್ ಜಾರಿ ಆಗಿದೆ.
ಹೌದು.ಡಿಕೆ ಶಿವಕುಮಾರ್ ಅವರೇ ಈ ವಿಚಾರವನ್ನ ಈಗ ರಿವೀಲ್ ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘಟನೆ ಮಾಡಿ ಪ್ರತಿಭಟನೆ ಮಾಡಿರೋದಕ್ಕೆ ಸಂಬಂಧಿಸಿದಂತೆ ನನಗೆ ಈಗ ಕೋರ್ಟ್ ವಾರೆಂಟ್ ಜಾರಿ ಮಾಡಿದೆ ಅಂತಲೇ ಬೆಂಗಳೂರಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿಯೇ ರೈತರ ಪ್ರತಿಭಟನೆ,ಬೆಲೆ ಏರಿಕೆ ವಿರುದ್ದ ಹೋರಾಟ ಮಾಡಿದ್ದೇನೆ. ಈ ಕಾರಣಕ್ಕೆ ನೋಟೀಸ್ ಬಂದಿದೆ. ಈಗ ಕೋರ್ಟ್‌ಗೂ ಹೋಗುತ್ತಿದ್ದೇನೆ. ಆ ಮೇಲೆ ಮಾತನಾಡುವೆ ಅಂತಲೂ ಡಿಕೆಶಿ ಹೇಳಿದ್ದಾರೆ.
PublicNext
22/04/2022 02:37 pm