ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುನಂದಾ ಪುಷ್ಕರ್ ಸಾವಿನ ಕೇಸ್ : ಶಶಿ ತರೂರ್ ನಿರ್ದೋಷಿ, ದೆಹಲಿ ಕೋರ್ಟ್

ನವದೆಹಲಿ: ಕಾಂಗ್ರೆಸ್ ಮುಖಂಡ, ಶಶಿ ತರೂರ್ ಗೆ ತಮ್ಮ ಹೆಂಡತಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ನಿರ್ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ. 2014ರ ಜನವರಿಯಲ್ಲಿ ಸುನಂದಾ ಪುಷ್ಕರ್ ಅವರ ಶವ ಹೋಟೆಲ್ ಕೋಣೆಯಲ್ಲಿ ಪತ್ತೆಯಾಗಿತ್ತು. ಶಶಿ ತರೂರ್ ಮತ್ತು ಸುನಂದಾ ಜತೆಯಾಗಿ ಹೋಟೆಲ್ ರೂಂನಲ್ಲಿ ಉಳಿದುಕೊಂಡಿದ್ದರು. ಶಶಿ ತರೂರ್ ಅವರ ಅಧಿಕೃತ ಬಂಗಲೆಯ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ದಂಪತಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.

ಆದರೆ ಸುನಂದಾ ಪುಷ್ಕರ್ ಅವರನ್ನು ಡ್ರಗ್ಸ್ ಚುಚ್ಚಿ ಸಾಯಿಸಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿತ್ತು. ಇದರೊಂದಿಗೆ ಪತ್ನಿ ಸುನಂದಾ ಸಾವಿನ ಹಿಂದೆ ಪತಿ ತರೂರ್ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498 ಎ(ವೈವಾಹಿಕ ಹಿಂಸೆ) ಮತ್ತು 306 (ಆತ್ಮಹತ್ಯೆಗೆ ಪ್ರೇರಣೆ)ರ ಕಾಯ್ದೆಯಡಿ ಆರೋಪಿ ಎಂದು ಉಲ್ಲೇಖಿಸಿದ್ದರು.

ಪ್ರಕರಣದಲ್ಲಿ ತರೂರ್ ಗೆ 2018ರ ಜುಲೈ 5ರಂದು ಜಾಮೀನು ನೀಡಲಾಗಿತ್ತು. ಶಶಿ ತರೂರ್ ವಿರುದ್ಧದ ಆರೋಪದ ಕುರಿತು ವಿಚಾರಣೆ ನಡೆಸಿದ್ದ ದೆಹಲಿ ಸೆಷನ್ಸ್ ಕೋರ್ಟ್ ನಿರ್ದೋಷಿ ಎಂದು ಬುಧವಾರ (ಆಗಸ್ಟ್ 18) ತೀರ್ಪು ನೀಡಿದೆ.

Edited By : Nirmala Aralikatti
PublicNext

PublicNext

18/08/2021 01:12 pm

Cinque Terre

33.44 K

Cinque Terre

2

ಸಂಬಂಧಿತ ಸುದ್ದಿ