ಬೆಂಗಳೂರು : ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದೇ ತಡ ಇತ್ತ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಪ್ರೇರಿತ ದಾಳಿಯಂದು ಆರೋಪಿಸಿ ಪ್ರತಿಭಟನೆ ಹೈಡ್ರಾಮಾ ಶುರುಮಾಡಿದ್ದಾರೆ.
ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸಿ.ಟಿ.ರವಿ ಅವರು ಹೆಸರು ಹೇಳದೇ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯವರ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಇಡಿ ಹಾಗೂ ಐಟಿ ಲೆಕ್ಕ ಹಾಕಿದೆ.
ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪವಿದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ.
ಅದರ ಆಧಾರದ ಮೇಲೆ ಇಂದು ಸಿಬಿಐ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.
PublicNext
05/10/2020 02:08 pm