ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ನೂರೆಂಟು ನಿಬಂಧನೆ ಬೇಡ; ಅದ್ಧೂರಿ ಗಣೇಶೋತ್ಸವಕ್ಕೆ ಅನುಮತಿ ಕೊಡಿ

ದಾವಣಗೆರೆ: ರಾಜ್ಯದಲ್ಲಿ ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ಅವಕಾಶಕೊಡಿ ನೂರೆಂಟು ನಿಬಂಧನೆ ಹಾಕಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಕೂರಿಸಲು ಗಣೇಶ ಮಂಡಳಿಗೆ ಅವಕಾಶ ನೀಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಾರಿ ಯಾವುದೇ ನಿಬಂಧನೆ ಹಾಕದೆ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 8 ಕಡೆ ಅನುಮತಿ ಪಡೆಯಬೇಕು. ಇದಕ್ಕೆ ಒಂದೆಡೆ ಅನುಮತಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಡಿಜೆ ಸೌಂಡ್ ಗೆ ಪರ್ಮಿಶನ್ ತಗೋಬೇಡಿ. ಇ‌ನ್ನೂ ಡಬಲ್ ಸೌಂಡ್ ಹಚ್ಚಿಸಿ. ಸುಪ್ರೀಂ ಕೋರ್ಟ್ ಹೆಸರೇಳಿ ನಮ್ಮನ್ನ ಹತ್ತಿಕ್ಕುಕ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸೌಂಡ್ ಸಿಸ್ಟಂಗೆ ಪರ್ಮಿಶನ್ ತಗೋಬೇಕು ಎಂದು ಹೇಳುತ್ತಾರೆ. ಮಸೀದಿಯ ಲೌಡ್ ಸ್ಪೀಕರ್ ಗೆ ಎಲ್ಲಿದೆ ಅನುಮತಿ?ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಬೆಳಿಗ್ಗೆ ಲೌಡ್ ಸ್ಪೀಕರ್ ಹಾಕಬಾರದು ಅಂತ ಹೇಳಿದೆ.

ಆದರೂ ಈಗಲೂ ಮಸೀದಿಯ ಮೈಕ್ ನಿಂತಿಲ್ಲ. ನಮ್ಮ ಸಾರ್ವಜನಿಕ ಗಣೇಶ ಮಂಡಳಿಗಳ ಸೌಂಡ್ ನಿಲ್ಲಿಸಲು ನಿಮಗೆ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ತಾಖತ್ ಇದ್ದರೆ ಮಸೀದಿ ಮೇಲಿನ ಮೈಕ್ ನಿಲ್ಲಿಸಿ. ಆಮೇಲೆ ಗಣೇಶೋತ್ಸವ ವಿಚಾರಕ್ಕೆ ಬನ್ನಿ ಎಂದು ಸವಾಲು ಹಾಕಿದರು.

Edited By : Somashekar
PublicNext

PublicNext

13/08/2022 07:00 pm

Cinque Terre

52.85 K

Cinque Terre

7

ಸಂಬಂಧಿತ ಸುದ್ದಿ