ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ವರಿಗೂ ಸಮವಸ್ತ್ರ ನಿಯಮ ಪಾಲಿಸಬೇಕು : ಅಮಿತ್ ಶಾ

ನವದೆಹಲಿ: ರಾಜ್ಯದಲ್ಲಿ ಉಂಟಾದ ಹಿಜಾಬ್ ಕಿಚ್ಚು ಎಲ್ಲೇಡೆ ಕಿಚ್ಚು ಹಚ್ಚಿದೆ. ಕರ್ನಾಟಕ ಹೈ ಕೋರ್ಟ್ ನಲ್ಲಿ ಹಿಜಾಬ್ ವಿವಾದ ಕುರಿತ ಅರ್ಜಿ ವಿಚಾರಣೆಯೂ ನಡೆಯುತ್ತಿದೆ. ಸದ್ಯ ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲ ಧರ್ಮದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳಲ್ಲಿ ಸೂಚಿಸಿದ ಸಮವಸ್ತ್ರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ಧರ್ಮವನ್ನು ಲೆಕ್ಕಿಸದೆ ಕಡ್ಡಾಯವಾಗಿ ಸಮವಸ್ತ್ರ ಧರಿಸುವ ನಿಮಯವನ್ನು ಪಾಲನೆ ಮಾಡಬೇಕು.

'ಈ ವಿಷಯವು ನ್ಯಾಯಾಲಯದ ಪರಿಧಿಯಲ್ಲಿದ್ದು, ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನ್ಯಾಯಾಲದಯ ತೀರ್ಪು ನೀಡುವವರೆಗೂ ನನ್ನ ವೈಯಕ್ತಿಕ ನಿಲುವಿನಲ್ಲಿ ನಂಬಿಕೆ ಇರಿಸುತ್ತೇನೆ. ಆದರೆ ನ್ಯಾಯಾಲದ ತೀರ್ಪು ಏನೇ ಆದರೂ ಅದನ್ನು ಒಪ್ಪಿಕೊಳ್ಳುತ್ತೇನೆ' ಎಂದು ಹೇಳಿದರು.

Edited By : Nirmala Aralikatti
PublicNext

PublicNext

21/02/2022 06:03 pm

Cinque Terre

60.89 K

Cinque Terre

5

ಸಂಬಂಧಿತ ಸುದ್ದಿ