ಬೆಂಗಳೂರು: ರಾಜ್ಯದ 1 ಕೋಟಿ 20 ಲಕ್ಷ ವಿದ್ಯಾರ್ಥಿಗಳಲ್ಲಿ ಕೇವಲ 500ರಿಂದ 600 ಮಕ್ಕಳು ಹಿಜಾಬ್‌ಗೆ ಹಠ ಹಿಡಿದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಈ ಸಂಖ್ಯೆಯೂ ತಗ್ಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್‌ನ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ಹಿಜಾಬ್ ಪರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪೋಷಕರಲ್ಲದೆ ಹೊರಗಿನವರೂ ಇದ್ದಾರೆ. ಕೆಲವು ಕಡೆ ಅಂತಹ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
PublicNext
17/02/2022 06:29 pm