ಪಿಎಸ್‌ಐ ಪರೀಕ್ಷೆ ಅಕ್ರಮ ಕುರಿತ ಪ್ರಕರಣ ಬೇಸತ್ತ ಅಭ್ಯರ್ಥಿಗಳು ಮತ್ತೆ ಬೀದಿಗಿಳಿದಿದ್ದಾರೆ. ಮರು ಪರೀಕ್ಷೆ ನಿರ್ಧಾರ ಕೈ ಬಿಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 300ಕ್ಕೂ ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿದ್ದಾರೆ. 'ಉಳಿಸಿ ಉಳಿಸಿ ಪ್ರಮಾಣಿಕರನ್ನು ಉಳಿಸಿ' ಅಂತ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಹಂಚಿಕೆ ಮಾಡಬೇಕು ಅಂತ ಆಗ್ರಹ ಕೇಳಿ ಬರುತ್ತಿದ್ದು, ಅಭ್ಯರ್ಥಿಗಳ ಜೊತೆ ಅಭ್ಯರ್ಥಿಗಳ ಪೋಷಕರು ಮತ್ತು ಸಮತಾ ಸೈನಿಕ ದಳ ಕೂಡ ಸಾಥ್ ನೀಡಿದೆ. ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿರುವ ಅಭ್ಯರ್ಥಿಗಳು ನ್ಯಾಯಸಿಗುವವರೆಗೂ ಹೋರಾಟ ಮಾಡುತ್ತೇವೆ ಅಂತ ಪಟ್ಟು ಹಿಡಿದಿದ್ದಾರೆ.
ಮರು ಪರೀಕ್ಷೆ ನಿರ್ಧಾರ ಹಿಂಪಡೆಯುವಂತೆ ಒತ್ತಾಯ ಹೆಚ್ಚಾಗಿದ್ದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡುವಂತೆ ಅಭ್ಯರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ. ಪ್ರತಿಭಟನೆ ಸ್ಥಳದಲ್ಲಿ ಫ್ರೀಡಂ ಪಾರ್ಕ್ ಬಳಿ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ಗೆ ನಿಯೋಜನೆಯಾಗಿದ್ದಾರೆ.
PublicNext
28/05/2022 03:34 pm