ಚಿಕ್ಕಬಳ್ಳಾಪುರ: ಕರ್ಫ್ಯೂ ಇಲ್ಲ ಅಂತ ಜನ ಸ್ವೇಚ್ಛಾಚಾರವಾಗಿ ತಿರುಗಾಡಬಾರದು ಜನ ಬಹಳ ಹೊಣೆಗಾರಿಕೆಯಿಂದ ಒಡಾಟ ಮಾಡಬೇಕು, ಬೀದಿ ಬದಿ ವ್ಯಾಪಾರಿ ದಿನನಿತ್ಯ ದುಡಿದು ತಿನ್ನುವವರಿಗೆ ಹೊಡೆತ ಬಿದ್ದಿತ್ತು ಜನರ ಬದುಕಿಗೋಸ್ಕರ ವಿಕೇಂಡ್ ಕರ್ಪ್ಯೂ ವಾಪಾಸ್ ಪಡೆಯಲಾಗಿದೆ.
ಈಗ ಆಸ್ಪತ್ರೆಗೆ ಸೇರುವವರ ಸಂಖ್ಯೆ ೫% ಇದೆ.ಇದಕ್ಕಿಂತ ಜಾಸ್ತಿ ಆದ್ರೆ ಮುಂದಿನ ವಾರದಿಂದಲೇ ವಿಕೇಂಡ್ ಕರ್ಪ್ಯೂ ಜಾರಿ ಮಾಡುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಪಾದಯಾತ್ರೆ ಭದ್ರತೆಗೆ ಹೋದ ಶೇ 60 ಕ್ಕಿಂತ ಹೆಚ್ಚಿನ ಮಂದಿಗೆ ಪಾಸಿಟಿವ್ ಬಂದಿದೆ, ಜಿಲ್ಲೆಯಲ್ಲಿ 165 ಮಂದಿಗೆ ಕೊರೋನಾ ಸೋಂಕು ತಗುಲಿದೆ,ಪಾದಯಾತ್ರೆಗೆ ಹೋಗಿದ್ದ 65 ಮಂದಿಗೆ ಕೊರೋನಾ ಸೋಂಕು ಹಬ್ಬಿದೆ ಜಿಲ್ಲೆಯಲ್ಲಿ 125 ಮಂದಿಯಲ್ಲಿ 65 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಮಂಡ್ಯ, ಕೋಲಾರ, ರಾಮನಗರ, ಹಾಸನ ಅಲ್ಲಿಂದ ಹೋದವರಿಗೂ ಪಾಸಿಟಿವ್ ಆಗಿದೆ ಎಂದರು.
ಜನರ ಪ್ರಾಣ ಉಳಿಸೋದು ಸರ್ಕಾರದ ಮುಖ್ಯ ಜವಾಬ್ದಾರಿ ಬದುಕುಳಿದ್ರೆ ಏನ್ ಬೇಕಾದ್ರೂ ಮಾಡಬಹುದು ಬದುಕೇ ಇಲ್ಲ ಅಂದ್ರೆ..? ಆ ಕಾರಣಕ್ಕಾಗಿ ಜನ ಮಾಸ್ಕ್ ಬಿಡಬಾರದು ಕೊರೋನಾ ನಿಯಮಗಳನ್ನು ಪಾಲಿಸಬೇಕು.
ನೈಟ್ ಕರ್ಪ್ಯೂ ಜಾರಿಯಲ್ಲಿದೆ ನಮ್ಮ ಪೊಲೀಸರು ಬಹಳ ಪ್ರಮಾಣದಲ್ಲಿ ನಿರ್ಬಂಧ ಮಾಡ್ತಾರೆ, ಅನಾವಶ್ಯಕವಾಗಿ ತಿರುಗಾಡಿದ್ರೆ ಕೇಸ್ ಹಾಕ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
PublicNext
22/01/2022 10:48 am